ಬೆಂಗಳೂರು: ರಾಜ್ಯದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿಡಿಸಿದಂತ ಸ್ಯಾಂಟ್ರೋ ರವಿ ಸುದ್ದಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿದೆ. ಇಂದು ಮತ್ತೆ ಸರಣಿ ಟ್ವಿಟ್ ಮಾಡಿರುವಂತ ಜೆಡಿಎಸ್ ಪಕ್ಷವು ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಜೆಡಿಎಸ್ ಪಕ್ಷವು, ಬಿಜೆಪಿಯವರೆ, ದಾಖಲೆಗಳಿಲ್ಲದೆ ಮಾತಾಡುವುದು ಕುಮಾರಸ್ವಾಮಿ ಅವರ ಜಾಯಮಾನವೇ ಅಲ್ಲ. ಸ್ಯಾಂಟ್ರೋ ರವಿ ಯಾರೂ ಅಂತ ಗೊತ್ತೇ ಇಲ್ಲ ಎಂದ ನಿಮ್ಮ ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ ಎಂದು ಹೇಳಿದೆ.
@BJP4Karnataka ಅವರೆ,
ದಾಖಲೆಗಳಿಲ್ಲದೆ ಮಾತಾಡುವುದು @hd_kumaraswamy ಅವರ ಜಾಯಮಾನವೇ ಅಲ್ಲ. ಸ್ಯಾಂಟ್ರೋ ರವಿ ಯಾರೂ ಅಂತ ಗೊತ್ತೇ ಇಲ್ಲ ಎಂದ ನಿಮ್ಮ ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ.
1/6— Janata Dal Secular (@JanataDal_S) January 7, 2023
ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ಕಿಡಿಕಾರಿದೆ.
ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ @BSBommai ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ.
2/6— Janata Dal Secular (@JanataDal_S) January 7, 2023
ಸ್ಯಾಂಟ್ರೋ ರವಿಯೊಂದಿಗೆ ನಿಮ್ಮ ಸಚಿವರಿಗಿರುವ ಸಂಬಂಧವೇನು? ಉನ್ನತ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ, ವರ್ಗಾವಣೆ ಕೆಲಸ ಮಾಡಿಸುತ್ತೇನೆ ಎನ್ನುವ ಈ ಡೀಲ್ ಗಿರಾಕಿಯ ವ್ಯವಹಾರಕ್ಕೆ ಸಾಥ್ ನೀಡಿದವರು ಯಾರು? ಎಂದು ಪ್ರಶ್ನಿಸಿದೆ.
ಸ್ಯಾಂಟ್ರೋ ರವಿಯೊಂದಿಗೆ ನಿಮ್ಮ ಸಚಿವರಿಗಿರುವ ಸಂಬಂಧವೇನು? ಉನ್ನತ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ, ವರ್ಗಾವಣೆ ಕೆಲಸ ಮಾಡಿಸುತ್ತೇನೆ ಎನ್ನುವ ಈ ಡೀಲ್ ಗಿರಾಕಿಯ ವ್ಯವಹಾರಕ್ಕೆ ಸಾಥ್ ನೀಡಿದವರು ಯಾರು?
3/6— Janata Dal Secular (@JanataDal_S) January 7, 2023
ಸ್ಯಾಂಟ್ರೊ ರವಿಯ ಆಡಿಯೊಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಚಯವೇ ಇಲ್ಲವೆಂದ ಮೇಲೆ ಆತನಿಗೆ ಇಡೀ ರಾಜ್ಯ ಸರ್ಕಾರ ತನ್ನ ಜೇಬಲ್ಲಿದೆ ಎಂದು ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಕಮಿಷನ್ ದಂಧೆಗಾಗಿ ಇಂತಹ ಎಷ್ಟು ಅಯೋಗ್ಯರನ್ನು ಸಾಕುತ್ತಾ ಇದ್ದೀರಿ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಸ್ಯಾಂಟ್ರೊ ರವಿಯ ಆಡಿಯೊಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಚಯವೇ ಇಲ್ಲವೆಂದ ಮೇಲೆ ಆತನಿಗೆ ಇಡೀ ರಾಜ್ಯ ಸರ್ಕಾರ ತನ್ನ ಜೇಬಲ್ಲಿದೆ ಎಂದು ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಕಮಿಷನ್ ದಂಧೆಗಾಗಿ ಇಂತಹ ಎಷ್ಟು ಅಯೋಗ್ಯರನ್ನು ಸಾಕುತ್ತಾ ಇದ್ದೀರಿ?
4/6— Janata Dal Secular (@JanataDal_S) January 7, 2023
ಸತ್ಯದ ತಲೆ ಮೇಲೆ ಹೊಡೆದು ಹಸಿಸುಳ್ಳು ಹೇಳುವವರು ನೀವು. ಜನಹಿತಕ್ಕಾಗಿ ಕೆಲಸ ಮಾಡಬೇಕಿದ್ದ ಸರ್ಕಾರ, ಆಡಳಿತವನ್ನು ದಂಧೆ ಮಾಡಿಕೊಂಡಿದೆ. ಕುಮಾರಕೃಪ ಅತಿಥಿ ಗೃಹವನ್ನು ಜೂಜಿನ ಅಡ್ಡೆಯಂತೆ ಬಳಸುತ್ತಿದ್ದೀರಿ ಎಂದು ಹೇಳಿದೆ.
ಸತ್ಯದ ತಲೆ ಮೇಲೆ ಹೊಡೆದು ಹಸಿಸುಳ್ಳು ಹೇಳುವವರು ನೀವು. ಜನಹಿತಕ್ಕಾಗಿ ಕೆಲಸ ಮಾಡಬೇಕಿದ್ದ ಸರ್ಕಾರ, ಆಡಳಿತವನ್ನು ದಂಧೆ ಮಾಡಿಕೊಂಡಿದೆ. ಕುಮಾರಕೃಪ ಅತಿಥಿ ಗೃಹವನ್ನು ಜೂಜಿನ ಅಡ್ಡೆಯಂತೆ ಬಳಸುತ್ತಿದ್ದೀರಿ.
5/6— Janata Dal Secular (@JanataDal_S) January 7, 2023
ಕುಮಾರಸ್ವಾಮಿ ಬಿಡುಗಡೆ ಮಾಡಿದ ಒಂದು ವಿಡಿಯೋದಿಂದಾಗಿ ಇಂಗು ತಿಂದ ಮಂಗನಂತೆ ತಡಬಡಾಯಿಸುತ್ತಿರುವ ಬಿಜೆಪಿಯವರೆ, ನಿಮ್ಮ ಬುಡ ಅಲುಗಾಡುತ್ತಿದೆ. 2023ರ ಚುನಾವಣೆಯಲ್ಲಿ ನೀವು ಕುಸಿದು ಹೋಗುವುದು ಖಂಡಿತ ಎಂದು ತಿಳಿಸಿದೆ.
.@hd_kumaraswamy ಅವರು ಬಿಡುಗಡೆ ಮಾಡಿದ ಒಂದು ವಿಡಿಯೋದಿಂದಾಗಿ ಇಂಗು ತಿಂದ ಮಂಗನಂತೆ ತಡಬಡಾಯಿಸುತ್ತಿರುವ ಬಿಜೆಪಿಯವರೆ, ನಿಮ್ಮ ಬುಡ ಅಲುಗಾಡುತ್ತಿದೆ. 2023ರ ಚುನಾವಣೆಯಲ್ಲಿ ನೀವು ಕುಸಿದು ಹೋಗುವುದು ಖಂಡಿತ.
6/6— Janata Dal Secular (@JanataDal_S) January 7, 2023