ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING NEWS: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ನೇಮಕ
ಸ್ಯಾಂಟ್ರೋ ರವಿ ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ. ಈ ಸರ್ಕಾರದಲ್ಲಿ ತಲೆ ಹಿಡುಕನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ? ಗೃಹಮಂತ್ರಿ ಜ್ಞಾನೇಂದ್ರ ಅವರೇ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು? ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ? ತಲೆಹಿಡುಕ ಸ್ಯಾಂಟ್ರೋ ರವಿ ವರ್ಗಾವಣೆ ಸಂಬಂಧ ಹಲವು ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿರುವ ಆಡಿಯೋ ರಿಲೀಸ್ ಆಗಿದೆ ಎಂದರು.
1
'ಸ್ಯಾಂಟ್ರೋ ರವಿ' ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ.ಈ ಸರ್ಕಾರದಲ್ಲಿ 'ತಲೆ ಹಿಡುಕ'ನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ?
ಗೃಹಮಂತ್ರಿ ಜ್ಞಾನೇಂದ್ರರವರೆ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು?
ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2023
3
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ #BJP ಯ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ.BJPಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ?
BJPಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು?
ಉತ್ತರಿಸುವಿರಾ ಬೊಮ್ಮಾಯಿಯವರೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2023