ನವದೆಹಲಿ: ಗಣರಾಜ್ಯೋತ್ಸವದಲ್ಲಿ ಈ ಬಾರಿ ಕರ್ನಾಟಕದ ಸ್ಥಬ್ದ ಚಿತ್ರ ಇರೋಲ್ಲ ಎನ್ನಲಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ನೀಡುವ ನಿಟ್ಟಿನಲ್ಲಿ ಈ ಬಾರಿ ಕೇಂದ್ರ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಸ್ಥಬ್ದ ಚಿತ್ರ ಮೆರವಣಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ.
ಈ ಬಾರಿ ಕರ್ನಾಟಕದಿಂದ ನಾರಿ ಶಕ್ತಿಯನ್ನು ಒಳಗೊಂಡ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿತ್ತು ಎನ್ನಲಾಗಿದೆ. ಸಹಜವಾಗಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದ ಚಿತ್ರ ಅನುತಿ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಬೇಸರ ಮೂಡಿಸಿದೆ. ಅಂದ ಹಾಗೇ ಕಳೆದ 13 ವರ್ಷಗಳಿಂದ ಕರ್ನಾಟಕದ ಸ್ಥಬ್ದ ಚಿತ್ರಗಳು ಗಣರಾಜ್ಯೋತ್ಸವದ ವೇಳೇಯಲ್ಲಿ ಭಾಗವಹಿಸುತ್ತಿದ್ದವು. ಹಲವು ಬಾರಿ ಬಹುಮಾನಗಳನ್ನು ಕೂಡ ಪಡೆದುಕೊಂಡಿದೆ. ಈ ನಡುವೆ ಸ್ಥಬ್ದ ಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ, ಕನ್ನಡ ಪರ ಸಂಘಟನೆಗಳು ಕೇಂದ್ರದ ವಿರುದ್ದ ಕಿಡಿಕಾರಿದ್ದು, ಅನುಮತಿ ನೀಡದೇ ಹೋದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.