ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಚಿರತೆ ಕಣ್ಮರೆಯಾಗಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ಮತ್ತೆ ಹೊಸ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದೆ.
BREAKING NEWS: ಬಾಗಲಕೋಟೆಯಲ್ಲಿ ಓವರ್ ಟೇಕ್ ಮಾಡಲು ಹೋಗಿ ಎರಡು ಟ್ರ್ಯಾಕ್ಟರ್ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ
ರಸ್ತೆಯಲ್ಲಿ ಬೈಕಿನಲ್ಲಿ ಹೋಗುವಾಗ ಅಡ್ಡಗಟ್ಟುತ್ತಿರುವ ಚಿರತೆ ಹಾಗೂ ಮರಿಗಳನ್ನು ನೋಡಿ ಹೆದರಿ ಹೋಗಿದ್ದಾರೆ.ಕಳೆದ 5 ದಿನಗಳಿಂದ ನಾಗರಬಾವಿ ಸುತ್ತಾಮುತ್ತಾ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದಾಗಿ ಜನ ಹೊರಗಡೆ ಬರಲು ಹೆದರುತ್ತಿದ್ದಾರೆ. ಕಳೆದ ಮೂರು ದಿನದ ರಾತ್ರಿ ಬೈಕ್ ನಲ್ಲಿ ಬರುತ್ತಿರುವಾಗ ಚಿರತೆ ಕಂಡು ಬೈಕ್ ತಿರುಗಿಸಿ ಬೈಕ್ ಸವಾರ ಹಿಂದಕ್ಕೆ ಮರಳಿದ್ದಾರೆ.ನಾಗರಬಾವಿಯಿಂದ ಆರು ಕಿಮಿ ದೂರದಲ್ಲಿ ರಸ್ತೆ, ಮನೆಯ ಭಾಗಕ್ಕೆ ಚಿರತೆ ಪ್ರವೇಶ ಕೊಡುತ್ತಿದೆ. ಚಿರತೆ ಹೆಜ್ಜೆಯ ಜಾಡು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.ಈಗಾಗಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆಯನ್ನು ಮಾಡಿದ್ದು ಪಂಚಾಯತ್ ಸಿಬ್ಬಂದಿ ಈಗ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.