ಚಿಕ್ಕಮಗಳೂರು: ಜೆಡಿಎಸ್ ಪಕ್ಷದಿಂದ ( JDS Party ) ದೂರವೇ ಉಳಿದಿದ್ದಂತ ಮಾಜಿ ಸಚಿವ ವೈಎಸ್ ವಿ ದತ್ತಾ ( Farmer Minister YSV Datta ), ಕೊನೆಗೂ ಕಾಂಗ್ರೆಸ್ ಪಕ್ಷವನ್ನು ( Congress Party ) ಅಧಿಕೃತವಾಗಿ ಸೇರ್ಪಡೆಗೊಳ್ಳೋದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷದ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜನವರಿ 15ರಂದು ಜೆಡಿಎಸ್ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬುದಾಗಿ ಘೋಷಿಸಿದರು.
ಸಿದ್ಧರಾಮಯ್ಯ ( Siddaramaiah ) ಹಾಗೂ ಡಿಕೆ ಶಿವಕುಮಾರ್ ( DK Shivakumar ) ಅವರ ಸಮ್ಮುಖದಲ್ಲಿಯೇ ಸ್ವಗ್ರಾಹಮದಲ್ಲಿ ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಜೆಡಿಎಸ್ ನಾಯಕರಿಗೆ ಬಿಗ್ ಶಾಕ್ ನೀಡಿದರು.
ಇದೇ ವೇಳೆ ನನ್ನದು ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರದ್ದು ತಂದೆ-ಮಕ್ಕಳ ಸಂಬಂಧವಿದ್ದಂತೆ. 50 ವರ್ಷಗಳಿಂದ ಭಾವನಾತ್ಮಕ ಸಂಬಂಧವಿದೆ. ನಾನೆಲ್ಲೇ ಇದ್ದರೂ ದೇವೇಗೌಡರ ಹಾರೈಕೆ ನನ್ನ ಮೇಲೆ ಇರುತ್ತದೆ ಎಂದರು.
ನಾನು ಅನಿವಾರ್ಯ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇನೆ. ಈ ವಿಚಾರ ದೇವೇಗೌಡರಿಗೆ ಹೇಳಲು ಮುಜುಗರ ಆಗುತ್ತೆ. ನನ್ನ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದರು.
BIGG NEWS: ರಾಯಚೂರಿನಲ್ಲಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶಿಸಿದ ಗಾಲಿ ಜನಾರ್ದನ ರೆಡ್ಡಿ
ಗಮನಿಸಿ: ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ‘ಗಂಗಾ ಕಲ್ಯಾಣ ಯೋಜನೆ’ಗೆ ಅರ್ಜಿ ಆಹ್ವಾನ
ಹಾವೇರಿ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭಾಷಣದಲ್ಲೇ ‘ಡಬಲ್ ಎಂಜಿನ್ ಸರ್ಕಾರ’ ಟೀಕಿಸಿದ ‘ಸಾಹಿತಿ ದೊಡ್ಡರಂಗೇಗೌಡ’