ರಾಯಚೂರು: ರಾಜಕೀಯದಿಂದ ಸ್ವಲ್ಪ ವರ್ಷಗಳ ಕಾಲ ದೂರ ಸರಿದಿದ್ದ ಗಾಲಿ ಜನಾರ್ದನ ರೆಡ್ಡಿ ಇದೀಗ ಹೊಸ ಪಕ್ಷದ ಮೂಲಕ ಮತ್ತೆ ಸಂಚಲನ ಮೂಡಿಸಲಿದ್ದಾರೆ.
ಶಿವಮೊಗ್ಗ: ಸಾಗರದಲ್ಲಿ ಬಿಸಿಯೂಟ ಸೇವಿಸಿದ 15ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದು, ರಾಯಚೂರಿನಲ್ಲಿ ಬೃಹತ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾನೆ. ರಾಯಚೂರಿನ ಸಿಂಧನೂರಿನಲ್ಲಿ ಆಗಮಿಸಿದ ರೆಡ್ಡಿ ಕೆಆರ್ ಪಿಪಿ ಕಾರ್ಯಕರ್ತರ ಜತೆ ಸಭೆ ನಡೆಸಿದ್ದಾರೆ. ಪಿಡಬ್ಲ್ಯೂಡಿ ಕ್ಯಾಂಪಸ್ ನಿಂದ ಬೈಕ್ ರಾಲಿ ಪ್ರಾರಂಭ ಮಾಡಿದ್ದರು. ಇದೇ ವೇಳೆ ಕಾರಿನಲ್ಲಿ ಜನಾರ್ದನ ರೆಡ್ಡಿ ರೋಡ್ ಶೋ ನಡೆಸಿದ್ದು, ಹೊಸ ಪಕ್ಷಕ್ಕೆ ಶುಭ ಕೋರಿದ್ದಾರೆ.
ಇನ್ನು ಸಿಂಧನೂರಿನಲ್ಲಿ ಸಮಾವೇಶ ಹಮ್ಮಿಕೊಂಡಿರುವ ಪ್ರಯುಕ್ತ ಸಮಾವೇಶಕ್ಕೆ ಬರುವ ಬೈಕ್ ಗಳಿಗೆ ಪೆಟ್ರೋಲ್ ಉಚಿತ ಎಂದು ಘೋಷಿಸಿದ್ದರು. ಹೀಗಾಗಿ ಉಚಿತ ಪೆಟ್ರೋಲ್ ಪಡೆಯುವ ಸಲುವಾಗಿ ನೂಕನುಗ್ಗಲು ಉಂಟಾಯಿತು.