ಕಲಬುರ್ಗಿ: ಕಳೆದ ಕೆಲ ದಿನಗಳಿಂದ ಕೆಲವು ಆಡಿಯೋಗಳು ವೈರಲ್ ಆಗುತ್ತಿದ್ದು, ಅದನ್ನು ಆಡಳಿತ ಪಕ್ಷದವರು ನಿರಾಕರಿಸುತ್ತಿಲ್ಲ. ಬಿಜೆಪಿ ಎಂದರೆ ಬ್ಕೋಕರ್ಸ್ ಜನತಾ ಪಕ್ಷ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು, ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಜನ ಪೋಸ್ಟಿಂಗ್ ಗಳು, ವರ್ಗಾವಣೆ, ಬೇರೆ ಇಲಾಖೆಗಳ ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು. ಪಿಎಸ್ಐ, ಎಇಇ, ಜೆಇಇ, ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಗಳು ಬೇಕಿದ್ದರೂ ಮಾರಟ್ಟಕ್ಕೆ ಇಟ್ಟಿದ್ದಾರೆ ಎಂಬುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಕಳೆದ ಎರಡು ದಿನಗಳಿಂದ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ಈ ಹಿಂದೆ ನಮ್ಮ ರಾಜ್ಯ ತನ್ನ ಪ್ರಗತಿಪರ ಆಲೋಚನೆ, ಆರ್ಥಿಕ ನೀತಿ, ನಮ್ಮ ಆಡಳಿತದಿಂದ ದೇಶದಲ್ಲೇ ಮಾದರಿ ರಾಜ್ಯವಾಗಿ ಹೆಸರು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ರಾಜ್ಯ ಅಥ್ಯಂತ ಭ್ರಷ್ಟ ಸರ್ಕಾರ ಎಂಬ ಕಳಂಕ ಬಂದಿದೆ. ಯಡಿಯೂರಪ್ಪನವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಔಟ್ ಲುಕ್ ಮ್ಯಾಗಜೀನ್ ನಲ್ಲಿ ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಎಂಬ ಲೇಖನ ಬರೆದಿದ್ದರು. ಈಗ ಅದನ್ನೂ ಮೀರಿಸುವಂತೆ 40% ಸರ್ಕಾರ ಎಂಬ ಬಿರುದು ಬಂದಿದೆ ಎಂದರು.
ಬಹಳ ಪ್ರಮುಖ ವಿಚಾರ ಎಂದರೆ ರಾಜ್ಯದ ಅತ್ಯುತ್ತಮ ಸೇಲ್ಸ್ ಮನ್ ಆಗಿ ಉನ್ನತ ಮಟ್ಟದ ಅಧಿಕಾರಿಗಳು, ಮಂತ್ರಿಗಳು ಹಾಗೂ ಬ್ರೋಕರ್ ಜನತಾ ಪಕ್ಷದ ಶಾಸಕರು ಇದ್ದಾರೆ. ಕೆಲ ತಿಂಗಳ ಹಿಂದೆ ಸುದ್ದಿ ವಾಹಿನಿಗಳಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸೌಧ ಎದುರು ಶಾಸಕರ ಭವನದಲ್ಲಿ ಪಿಎಸ್ಐ ಹುದ್ದೆ ಮಾರಾಟಕ್ಕೆ ಸಂಧಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದು ವರದಿಯಾಗಿದೆ. ಇದೇ ರೀತಿ ಜ.4ರಂದು ಪಿಡಬ್ಲ್ಯೂ ಇಲಾಖೆ ಒಬ್ಬ ಕಿರಿಯ ಇಂಜಿನಿಯರ್ 10.5 ಲಕ್ಷ ಹಣದ ಜತೆ ಸಿಕ್ಕಿಬಿದ್ದಿದ್ದಾರೆ. ಜೆಇಇ ಬಳಿ ಇಷ್ಟು ದೊಡ್ಡ ಮೊತ್ತ ಹೇಗೆ ಬಂತು, ಅದನ್ನು ಇಷ್ಟು ಧೈರ್ಯವಾಗಿ ವಿಧಾನಸೌಧದ ಒಳಗೆ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಅದನ್ನು ಯಾವ ಅಧಿಕಾರಿ, ಮಂತ್ರಿಗಳಿಗೆ ಕೊಡಲು ಹೋಗಿದ್ದರು. ಇದು ತನಿಖೆ ಆಗಬೇಕಲ್ಲವೇ? ಎಂದು ಪ್ರಶ್ನಿಸಿದರು.
ಸಾರ್ವಜನಿಕವಾಗಿ ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ಮಧ್ಯವರ್ತಿ, ಸಚಿವರು, ಮುಖ್ಯಮಂತ್ರಿಗಳಿಗೆ ಮಧ್ಯವರ್ತಿಗಳು, ಶಾಸಕರು ಒಪ್ಪಿಕೊಂಡಿರುವ ಹಾಗೆ, ಶಾಸಕರು ಮಂತ್ರಿಗಳಿಗೆ, ಅಧಿಕಾರಿಗಳು ಶಾಸಕರಿಗೆ ಬ್ರೋಕರ್ ಗಳಾಗಿದ್ದಾರೆ. ಈ ಗೊಂದಲದ ಮಧ್ಯೆ, ಕೆಲವು ಪ್ರಕರಣಗಳಲ್ಲಿ ರೌಡಿ ಶೀಟರ್ ಗಳು ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಈ ಸರ್ಕಾರ ನಡೆಸುತ್ತಿರುವವರು ಯಾರು ಎಂಬ ಗೊಂದಲಕ್ಕೆ ಜನ ಒಳಗಾಗಿದ್ದಾರೆ. ನನ್ನ ಪ್ರಕಾರ ಈ ಸರ್ಕಾರವನ್ನು ಮುಖ್ಯಮಂತ್ರಿಗಳು ನಡೆಸುತ್ತಿಲ್ಲ. ಬಿಜೆಪಿಯಲ್ಲಿ ರೌಡಿ ಮೋರ್ಚಾ ಆರಂಭವಾಗಿದ್ದು, ಈಗ ಸರ್ಕಾರದಲ್ಲೂ ರೌಡಿ ಮೋರ್ಚಾ ಆರಂಭಿಸಿರುವಂತೆ ಕಾಣುತ್ತಿದೆ. ಸ್ಯಾಂಟ್ರೋ ರವಿ ಎಂಬಾತನಿಗೆ ಗೃಹಮಂತ್ರಿಗಳಿಗಿಂತ ಹೆಚ್ಚು ಮಾಹಿತಿ ಇದೆ, ಮುಖ್ಯಮಂತ್ರಿಗಳಿಗೆ ಅತ್ಯಂತ ಆಪ್ತವಾಗಿದ್ದಾನಂತೆ. ಆತ ಹೇಳುವ ಪ್ರಕಾರ, ಪೊಲೀಸ್ ಅಧಿಕಾರಿ ತನಿಖೆಗೆ ಕರೆದರೆ ‘ನಾನು ಸಾಮಾಜಿಕ ಸೇವೆ ಮಾಡುತ್ತಿದ್ದು ತನಿಖೆಗೆ ಬರಲು ಸಾಧ್ಯವಿಲ್ಲ’ ಎನ್ನುತ್ತಾರೆ. ಈತನ ಸಮಾಜಸೇವೆ ಏನೆಂದು ಕೇಳಿದರೆ ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್ ಮಾಡಿಸಿಕೊಡುತ್ತಾರಂತೆ. ಈ ಸರ್ಕಾರದಲ್ಲಿ ವರ್ಗಾವಣೆ, ಪೋಸ್ಟಿಂಗ್ ಭ್ರಷ್ಟಾಚಾರವನ್ನು ಸಾಮಾಜಿಕ ಸೇವೆ ಎಂದು ಪರಿಗಣಿಸಲಾಗಿದೆ ಎಂದರು.
ಎಲ್ಲ ಆಡಿಯೋ ಕ್ಲಿಪ್ ಕೇಳಿದರೆ ಆತ ಸುಳ್ಳು ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದಾನೆ ಎಂದು ಅನುಸುತ್ತಿದೆ. ನಿನ್ನೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೋ ನೋಡಿದರೆ ಆತ ಗೃಹ ಸಚಿವರು, ಕಂದಾಯ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿ, ಅವರ ಕುಟುಂಬದ ಜತೆ ಡನಾಡ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದರೆ ಇದೆಲ್ಲವು ಸತ್ಯ ಎನಿಸುವುದಿಲ್ಲವೇ? ನಾನು ಗೃಹ ಸಚಿವರಿಂದ ಪೋಸ್ಟಿಂಗ್ ಕೊಡಿಸುತ್ತೇನೆ. ಮುಖ್ಯಮಂತ್ರಿಗಳೇ ನನಗೆ ಸಾರ್ ಎಂದರು. ಅಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ? ಅಧಿಕಾರ ಹಿಡಿಯಲು ಅವರು ಯಾರ ಕಾಲನ್ನು ಬೇಕಾದರೂ ಹಿಡಿಯುತ್ತೀರಾ? ಅಧಿಕಾರಕ್ಕಾಗಿ ಎತಹವರನ್ನು ಬಳಸಿಕೊಳ್ಳುತ್ತೀರಾ? ಪುಡಿ ರೌಡಿಯೊಬ್ಬ ನನಗೆ ಸಿಎಂ ನನಗೆ ಸಾರ್ ಎನ್ನುತ್ತಾರೆ ಎಂದರೆ ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಕ್ಷಮೆ ಕೇಳುತ್ತಾರೆ ಎಂದರು.
ಆತ ಮಹಿಳೆಯರ ಜತೆ ನೀಚ ವ್ಯವಹಾರ ನಡೆಸುತ್ತಾನೆ ಎಂದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಾರನ್ನು ಒಧ್ದು ಒಳಗೆಹಾಕಬೇಕೋ ಅವನ ಕಾಲಿಗೆ ಪೊಲೀಸರು ಬೀಳುತ್ತಿದ್ದಾರೆ. ಕಂಬಿ ಏಣಿಸಬೇಕಾದ ವ್ಯಕ್ತಿ ಕುಮಾರ ಕೃಪದಲ್ಲಿ ಮುಖ್ಯಮಂತ್ರಿಗಳ ಜತೆ ಡೀಲ್ ಮಾಡುತ್ತಿದ್ದಾರೆ. ಇವರಿಗೆ ಕುಮಾರ ಕೃಪದಲ್ಲಿ ಗೆಸ್ಟ್ ಹೌಸ್ ಕೊಡಿಸಿದ್ದು ಯಾರು? ಇವರಿಗೆ ಯಾರ ಆಶಈರ್ವಾದವಿದೆ? ಬಿಜೆಪಿಯವರು ಹೊಸ ಚಾಳಿ ಕಲಿತಿದ್ದಾರೆ. ಏನೇ ಕೇಳಿದರೂ ಕಾಂಗ್ರೆಸ್ ಕಾಲದಲ್ಲಿ ಆಗಿಲ್ಲವೇ ಎಂದು ಕೇಳುತ್ತಾರೆ. ಆಗ ವಿರೋಧ ಪಕ್ಷದಲ್ಲಿದ್ದ ನೀವು ಏ ಮಾಡುತ್ತಿದ್ದಿರಿ? ನೀವು ಹೇಳಿದ ಪ್ರಕರಣಗಳನ್ನು ಸಿಬಿಐಗೆ ನೀಡಿ ಕ್ಲೀನ್ ಚಿಟ್ ಪಡೆದಿದ್ದೇವೆ. ಆದರೆ ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದರು.
ನೀವು ವಿರೋಧ ಪಕ್ಷಗಳಿಗೆ ಉತ್ತರ ಕೊಡಲು ಬಯಸದಿದ್ದರೆ, ಸಾರ್ವಜನಿಕರಿಗೆ ನೀಡಿ. ಸರ್ಕಾರ ಜನರಿಗೆ ಉತ್ತರ ನೀಡಬೇಕಲ್ಲವೇ? ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನಮ್ಮ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿಗಳು ಸ್ಯಾಂಟ್ರೋ ರವಿ ಬಳಸಿಕೊಂಡು ಸರ್ಕಾರ ಕೆಡವಲಾಗಿತ್ತು. ಈತನ ಪಾತ್ರ ಮಹತ್ವದ್ದಾಗಿದೆ. ಕೆಲ ಹಾಲಿ ಸಚಿವರಿಗೆ ಆಮೀಷ ನೀಡಿ ಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಜನರಿಗೆ ಸತ್ಯಾಂಶ ತಿಳಿಯಬೇಕಲ್ಲವೇ? ಒಬ್ಬ ರೌಡಿ ಶೀಟರ್ ನಿಂದ ಸರ್ಕಾರ ಬೀಳಿಸಲಾಗುತ್ತಿದೆ ಎಂದರೆ ಸರ್ಕಾರ, ನೀವು ಯಾರನ್ನೆಲ್ಲ ಇಟ್ಟುಕೊಂಡು ಸರ್ಕಾರ ಕೆಡವಿದಿರಿ ಎಂಬ ಸತ್ಯಾಂಶ ಜನರಿಗೆ ತಿಳಿಯಬೇಕು ಎಂದರು.
ರಾಜಾರೋಷವಾಗಿ ಭಾ,ಣ ಮಾಡುವ ಕಟೀಲ್ ಅವರು ಈಗ ಎಲ್ಲಿ ಹೋಗಿದ್ದಾರೆ? ಅವರಿಗೆ ಹಗರಣಗಳು ಬಂದಾಗ ಅವರು ಬಿಜೆಪಿ ರಾಜ್ಯಾಧ್ಯಕ್ಷರ ನಾಲಿಗೆ ಬಿದ್ದು ಹೋಗಿ, ಬಾಯಿಗೆ ಹೊಲಿಗೆ ಹಾಕಿಕೊಳ್ಳುತ್ತಾರೆ. ಅಭಿವೃದ್ಧಿ ವಿಚಾರ, ಹಗರಣ ಬಂದಾಗ ಮೌನವಾಗುತ್ತಾರೆ. ಆದರೆ ಚುನಾವಣೆ ಪ್ರಚಾರ ಹತ್ತಿರ ಬಂದಾಗ, ಹಲಾಲ್, ಆಜಾನ್, ಲವ್ ಜಿಹಾದ್ ನಂತಹ ಕೆಲಸಕ್ಕೆ ಬಾರದ ವಿಚಾರ ಮಾತನಾಡುತ್ತಾರೆ. ಸ್ವಾಮಿ ಕಟೀಲ್ ಅವರೇ ನೀವು ಸರ್ಕಾರ ನಡೆಸುತ್ತಿಲ್ಲವೇ? ಯಾಕೆ ಸುಮ್ಮನಿದ್ದೀರಿ?
ಬಿಜೆಪಿ ಸರ್ಕಾರ ರವಿ ಅವರಿಗೆ ಕುಮಾರಕೃಪದಲ್ಲಿ ಇರಲು ಅವಕಾಶ ಕೊಟ್ಟವರು ಯಾರು?
ಗೃಹ ಸಚಿವರು ಯಾವುದೇ ಪ್ರಕರಣ ದಾಖಲಾಗಿಲ್ಲ, ದಾಖಲಾದರೆ ತನಿಖೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ರವಿ ಅಧಿಕಾರಿಗಳಿಗೆ ಕರೆ ಮಾಡುತ್ತಿಲ್ಲ, ಅಧಿಕಾರಿಗಳು ರವಿಗೆ ಕರೆ ಮಾಡುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳು ರವಿಗೆ ಕರೆ ಮಾಡಿ ಸಹಾಯ ಕೇಳುತ್ತಿದ್ದರೆ ಇವರು ಯಾರಿಗೆ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಕರೆ ಮಾಡಿ ತಮ್ಮ ಬ್ಯಾಚ್, ಇಸವಿ, ಯಾವ ಠಾಣೆ ಬೇಕು ಎಂದು ಕೇಳುತ್ತಿದ್ದಾರೆ. ಈ ಸರ್ಕಾರ ಸುಮೋಟೋ ಪ್ರಕರಣ ದಾಖಲಿಸಿ ಆಂತರಿಕ ತನಿಖೆ ನಡೆಸಬಾರದೇ? ಕುಂಬಳಗೋಡು ಠಾಣೆಯಲ್ಲಿ ಪೋಸ್ಟಿಂಗ್ ನಡೆಯುತ್ತಿದ್ದು, 50 ನೀಡಲಾಗುತ್ತಿದ್ದು, 25 ಮುಂಗಡ ಹಣ ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಲಕ್ಷವೋ, ಕೋಟಿಯೋ ಯಾರಿಗೆ ಗೊತ್ತು? ಆ ಠಾಣೆಯಲ್ಲಿ ಯಾರು ಹೋಗಿದ್ದಾರೆ, ಅದನ್ನು ಮಾಡಿಸಿದ್ದು ಯಾರು? ಎಂಬ ತನಿಖೆ ಮಾಡಲು ಸುಮೋಟೋ ತೆಗೆದುಕೊಳ್ಳುತ್ತಿಲ್ಲ ಯಾಕೆ? ಅದಿಕಾರಿಗಳೇ ಕರೆ ಮಾಡುತ್ತಿರುವಾಗ ವರ್ಗಾವಣೆ ದಂಧೆ ನಡೆಯುತ್ತಿರುವುದಕ್ಕೆ ಸಾಕ್ಷಿ.
ಯಾವ ಅಧಿಕಾರಿ ಲಕ್ಷ ಕೋಟಿ ಕೊಟ್ಟು ಬರುತ್ತಾನೆ ಆತ ಮೊದಲ ದಿನದಿಂದಲೇ ವಸೂಲಿಗೆ ನಿಲ್ಲುತ್ತಾನೆ. ಹಣ ನೀಡಲು ಮಾಡಿದ ಸಾಲ ತೀರಿಸಲು, ಅದರ ಮೇಲೆ ಲಾಭ ಮಾಡಲು, ಮುಂದಿನ ಪೋಸ್ಟಿಂಗ್ ಗೆ ಹಣ ಹೊಂದಿಸಲು ಗಮನಹರಿಸುತ್ತಾನೆ. ಸರ್ಕಾರ ನಡೆಯುವುದು ಹೀಗೆನಾ?
ರವಿ ವರ ವಾಟ್ಸಪ್ ಸ್ಟೇಟಸ್ ನೋಡಿದ್ದೀರಾ? ಕಂತೆ ಕಂತೆ ಹಣದ ಮುಂದೆ ರಾಜಾರೋಷವಾಗಿ ಕೂತಿರುವ, ಬ್ಯಾಗಿಗೆ ಹಣ ತುಂಹುತ್ತಿರುವ ಫೋಟೋಗಳು ಹರಿದಾಡಿವೆ. ಚಿನ್ನದ ಬಿಸ್ಕೆಟ್ ಗಳು ಇದ್ದವು. ಐಟಿ, ಇಡಿಗಳು ಎಲ್ಲಿ ಹೋಗಿವೆ? ಈ ಸಂಸ್ಥೆಗಳು ಕೇವಲ ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರ ಸೀಮಿತವೇ? ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ನಡೆಸಲಾ?
ಈ ಪ್ರಕರಣದಲ್ಲಿ ಮೊದಲಿಗೆ ಸರ್ಕಾರ ಎಲ್ಲ ಇಲಾಖೆಗಳ ವರ್ಗಾವಣೆ ತಕ್ಷಣವೇ ನಿಲ್ಲಿಸಬೇಕು. ಈಗ ಬಿಡುಗಡೆಯಾಗಿರುವ ಆಡಿಯೋ ಕ್ಲಿಪ್ ಸಿಬಿಐ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಬಿಜೆಪಿ ಮಾತೆತ್ತಿದರೆ ಪ್ರಾಮಾಣಿಕ ಸರ್ಕಾರ, ನಮ್ಮ ವಿಶ್ವ ಗುರು ಮೋದಿ ಅವರು ನಾಖಾವೂಂಗಾ ನಾಖಾನೇದೂಂಗ ಎಂದು ಹೇಳಿದ್ದು, ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಈಪ್ರಕರಣವನ್ನು ಸಿಬಿಐಗೆ ನೀಡಿ. ನೀವು ಆಂತರಿಕ ತನಿಖೆ ಮಾಡಿಸಿದರೆ ಇದನ್ನು ಮುಚ್ಚಿಹಾಕುತ್ತೀರಿ. ಸಿಸಿಬಿ, ಸಿಒಡಿಗಳಲ್ಲಿ ಎಲ್ಲರೂ ಇವರ ಒಡಿನಾಡಿಗಳೇ ಇರಬಹುದು, ಇವನಿಂದಲೇ ಸಹಾಯ ಪಡೆದಿಲ್ಲ ಎಂಬ ಖಾತರಿ ಇದೆಯಾ? ಜನರಿಗೆ ಸತ್ಯಾಂಶ ತಿಳಿಸುವ ಆಸಕ್ತಿ ಇದೆಯೇ ಅಥವಾ, ಬೇರೆ ಹಗರಣಗಳಂತೆ ಹೆಸರಿಗೆ ತನಿಖೆ ಮಾಡಿ ಜಾಮೀನು ನೀಡುವುದೇ? ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಲ್ಲ ಆರೋಪಿಗೂ ಜಾಮೀನು ಸಿಕ್ಕಿದೆ. ಅವರಿಗೆ ಯಾಕೆ ಜಾಮೀನು ಸಿಕ್ಕಿದೆ ಎಂದು ಕೇಳಿದರೆ ತಾಂತ್ರಿಕ ದೋಷದಿಂದ ಜಾಮೀನು ಸಿಕ್ಕಿದೆ ಎಂದು ಗೃಹಸಚಿವರು ಹೇಳುತ್ತಾರೆ. ಹಾಗಾದರೆ ಸರ್ಕಾರ ಎಂತಹ ವಕೀಲರನ್ನು ನೇಮಿಸಿದೆ? ಯುವಕರ ಭವಿಷ್ಯ ನಾಶ ಮಾಡಿದವರಿಗೆ ಜಾಮೀನು ಸಿಗುತ್ತಿದ್ದರೆ ಸರ್ಕಾರದ ಸಾಮರ್ಥ್ಯ ಎಷ್ಟಿದೆ?
ರಾಜ್ಯದಲ್ಲಿ ಜೆ.ಪಿ ನಡ್ಡಾ ಅವರು ಪ್ರವಾಸ ಮಾಡುತ್ತಿದ್ದು, ಅವರು ವೇದಿಕೆ ಮೇಲಿಂದ ಇಳಿದು ಅವರ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂದು ಜನರ ಮಾತನ್ನು ಕೇಳಬೇಕು. ಸುಮ್ಮನೆ ಕಾಂಗ್ರೆಸ್ ವಿರುದ್ಧ ಮಾತನಾಡಿದರೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟ ಪಕ್ಷ, ಕೋಮುವಾದಿ ಪಕ್ಷ, ಜಾತಿವಾದಿ ಪಕ್ಷ ಎಂದು ಲೇಪ ಹಚ್ಚುತ್ತಿದ್ದಾರೆ. ಅವರ ಸರ್ಕಾರ 40% ನಿಂದ 50% ಸರ್ಕಾರವಾಗಿದೆ. ಪುಡಿ ರೌಡಿಗಳು ನಿಮ್ಮ ಸರ್ಕಾರ ನಡೆಸುತ್ತಿದ್ದಾರೆ. ದಿನನಿತ್ಯ ವಿವಿಧ ಸಂಘಟನೆ ದಿನ ನಿತ್ಯ ಗಡವು ನೀಡುತ್ತಿದ್ದಾರೆ. ಈ ಸರ್ಕಾರ ಸಮಾಜಘಾತುಕ ಹಾಗೂ ರೌಡಿ ಶಕ್ತಿಗಳಿಂದ ನಡೆಯುತ್ತಿದೆ. ಇದೆಲ್ಲವನ್ನು ನೋಡಿಕೊಂಡು ಅವರು ಸುಮ್ಮನೆ ಕೂತಿದ್ದಾರೆ.
ಇನ್ನು ಎರಡನೇ ವಿಚಾರ ಎಂದರೆ ಇಂದು ಕೆಡಿಪಿ ಸಭೆ ನಡೆಯಬೇಕಾಗಿತ್ತು. ಮೊದಲನೆಯದಾಗಿ ಜಿಲ್ಲಾಡಳಿತಕ್ಕೆ ಕೆಡಿಪಿ ಸಭೆ ಹೇಗೆ ನಡೆಸಬೇಕು ಎಂಬ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕೆಡಿಪಿ ಸಭೆ 7 ದಿನಗಳ ಮುನ್ನ ಎಲ್ಲರಿಗೂ ಸೂಚನೆ ನೀಡಬೇಕು. ಜ.2ರಂದು 6ನೇ ತಾರೀಕೂ ಸಭೆ ಇದೆ ಎಂದು ಸೂಚನೆ ನೀಡಿದ್ದರು. ನಾವು ಜಿಲ್ಲೆಯ ಚರ್ಚೆ ಮಾಡಬೇಕು, ರೈತರು, ಅನುದಾನ, ಜಿಲ್ಲೆ ಸಮಸ್ಯೆ ಚರ್ಚೆ ಮಾಡಬೇಕಿದೆ ಎಂದು ಒಪ್ಪಿಗೆ ನೀಡಿದೆವು. ನಿನ್ನೆ ಅವರು ಒಂದು ಆದೇಶ ಹೊರಡಿಸಿ ಸಭೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕನ್ಟಾಕದ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡಿ ಎಂದರೆ ಅಮಿತ್ ಶಾ ಬಂದಿದ್ದಾರೆ ಎಂದು ಅಧಿವೇಶನವನ್ನು ಅಂತ್ಯಗೊಳಿಸಿದ್ದಾರೆ. ಈಗ ಜೆ.ಪಿ ನಡ್ಡಾ ಅವರು ಬಂದಿದ್ದಾರೆ ಎಂದು ಸಭೆ ಮುಂದೂಡಿ ಚರ್ಚೆ ನಡೆಸುತ್ತಿಲ್ಲ. ಮೊದಲು ಇವರು ನಿಯಮ ಪಾಲಿಸುವುದಿಲ್ಲ, ಅವರಿಗೆ ಕೆಲಸ ಇರುತ್ತದೆ ನಮಗೆ ಕೆಲಸ ಇರುವುದಿಲ್ಲವೇ? ಅವರು ಅವರ ಪಕ್ಷ ಬಲವರ್ದನೆ ಮಾಡಿಕೊಂಡು ಇರಲಿ, ಅವರನ್ನು ಕಾಯುತ್ತಾ ನಾವು ಕುಳಿತಿರಬೇಕಾ? ಇವರು ಕಾಟಾಚಾರಕ್ಕೆ ಕೆಡಿಪಿ ಕಾಟಾಚಾರಕ್ಕೆ ಮಾಡಿ 2 ತಾಸಿನಲ್ಲಿ 46 ಇಲಾಖೆ ವಿಚಾರ ಮುಕ್ತಾಯಗೊಳಿಸಿದರು. ನಾಳೆಯೂ ಅದೇ ರೀತಿ ಮಾಡಿದರೆ ನಾವುಗಳು ಯಾಕೆ ಹೋಗಬೇಕು? ನಾವು ನಮ್ಮ ಕಾರ್ಯಕ್ರಮ ಬದಿಗೊತ್ತಿ ಸಭೆಯಲ್ಲಿ ಭಾಗವಹಿಸಲು ಬಂದರೆ ಈ ರೀತಿ ಮಾಡುತ್ತಾರೆ. ನಾವು ಅಧಿವೇಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಿ ಎಂದರೆ ನೆದರ್ಲೆಂಟ್, ಬೆಲ್ಜಿಯಂ, ಫ್ರಾನ್ಸ್ ಪ್ರವಾಸಕ್ಕೆ ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಯಾವ ನಿಯಮದ ಅಡಿಯಲ್ಲಿ ಇವರು ಪ್ರವಾಸಕ್ಕೆ ಹಣ ಪಡೆದಿದ್ದಾರೆ? ನನಗೆ ಅಚ್ಚರಿ ಏನೆಂದರೆ, ಬಿಜೆಪಿ ನಾಯಕರು ಪ್ರವಾಸಕ್ಕೆ ಹೋಗಿಲ್ಲ, ಅದು ರದ್ದಾಗಿದೆ ಎಂದು ಹೇಳುತ್ತಾರೆ. ಆದರೆ ನಿಮ್ಮ ಖಾತೆಯಿಂದ ಟ್ರಾವೆಲ್ ಏಜೆಂಟರ್ ಖಾತೆಗೆ ಹಣ ಹೋಗಿದೆ. ಪ್ರವಾಸ ಹೋಗದೇ ಕೋಟಿ ಹಣವನ್ನು ಖರ್ಚು ಮಾಡಿದ್ದೀರಾ? ಇನ್ನು ಹೋಗಿದ್ದರೆ ಎಷ್ಟು ಖರ್ಚು ಮಾಡುತ್ತಿದ್ದಿರಿ? ಇಂತಹ ಮೂರ್ಖ ಹೇಳಿಕೆ ನೀಡಲು ಹೇಗೆ ಸಾಧ್ಯ? ಮೊದಲು ಕೆಕೆಆರ್ ಡಿ ಇಂದ ಪ್ರವಾಸ ಆಯೋಜಿಸಿದ್ದೇ ತಪ್ಪು, ನಂತರ ಹಣ ನೀಡಿದ್ದು, ಮತ್ತೊಂದು ತಪ್ಪು, ಹೋಗಿ ಬಂದ ಮೇಲೆ ಹೋಗೇ ಅಲ್ಲ ಎಂದು ಹೇಳುವುದು ಮಗದೊಂದು ತಪ್ಪು. ಜನರನ್ನು ಮೂರ್ಖರೆಂದು ಭಾವಿಸಿದ್ದೀರಾ? ಈ ಬಗ್ಗೆ ಸದನದಲ್ಲಿ ಕೇಳಿದರೆ ಮರುಪಾವತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾರು ಮರುಪಾವತಿ ಮಾಡಿದ್ದಾರೆ? ನೀವು ಮರುಪಾವತಿಗೆ ಬರೆದಿದ್ದಾರೆ. ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರುತ್ತಿದ್ದು, ನಾವು ಜನರ ಬಳಿ ಹೋಗುತ್ತೇವೆ. ಜನರೇ ತೀರ್ಪು ನೀಡುತ್ತಾರೆ.
ವೈಯಕ್ತಿಕವಾಗಿ ಹಾಗೂ ಪಕ್ಷದವತಿಯಿಂದ ನೆಟ್ಟೆ ರೋಗದ ಬಗ್ಗೆ ಚರ್ಚೆ ಮಾಡಲು ಸರ್ಕಾರ ನಮ್ಮ ಬಳಿ ಸಮಯ ಕೇಳಿದೆ. ನಾನು ಮುಖ್ಯಮಂತ್ರಿಗಳನ್ನು ವೈಯಕ್ತಿಕವಾಗಿ ಭೇಟಿಯಾದಾಗ, ಪರಿಹಾರ ಕೇಳಿದ್ದು, ಒಂದು ವಾರ ಹತ್ತು ದಿನಗಳಲ್ಲಿ ಆರ್ಥಿಕ ಇಲಾಖೆ ಹಾಗೂ ಕೃಷಿ ಸಚಿವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಪರಿಹಾರ ನೀಡದಿದ್ದರೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಈ ಹೋರಾಟಕ್ಕೆ ಮಾಧ್ಯಮಗಳ ಮೂಲಕ ಎಲ್ಲ ರೈತರ ಬೆಂಬಲ ಕೋರುತ್ತೇವೆ. ರೈತರ ಪರವಾಗಿ ಯಾರೆಲ್ಲಾ ಹೋರಾಟ ಮಾಡಲು ತಯಾರಾಗಿದ್ದಾರೆ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಅದರಲ್ಲಿ ರಾಜಕೀಯ ಮಾಡುವುದಿಲ್ಲ. ಯಾರಿಂದ ನ್ಯಾಯ ಕೊಡಿಸಲು ಸಾಧ್ಯವೋ ಅವರಿಗೆ ಬಂಬಲ ನೀಡುತ್ತೇವೆ.’
ಪಿಎಸ್ಐ ಪ್ರಕರಣದಲ್ಲಿ ಹೋರಾಟ ನಿಲ್ಲಿಸುತ್ತೀರಾ ಎಂದು ಕೇಳಿದಾಗ, ‘ವೈಯಕ್ತಿಕವಾಗಿ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ನಾನು ಆರಂಭದ ದಿನದಿಂದಲೂ ಕೇವಲ ಪಿಎಸ್ಐ ಮಾತ್ರವಲ್ಲ, ಕೆಪಿಟಿಸಿಎಲ್, ಕೆಇಎ, ಕೆಪಿಎಸ್ ಸಿ, ನೇಮಕಾತಿ ಅಕ್ರಮ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಆಸಕ್ತಿ ವಹಿಸಿದ್ದೇನೆ. ರಾಜ್ಯದಲ್ಲಿ 2.5 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಎಲ್ಲ ಜೆಇಇಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮಾರಾಟವಾಗಿದ್ದು, ನಾನು ಪ್ರಚಾರಕ್ಕೆ ಮಾತನಾಡುತ್ತಿಲ್ಲ. ಈ ಎಲ್ಲ ಅಕ್ರಮದ ಬಗ್ಗೆ ನಾನು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ. ಈ ವಿಚಾರದಲ್ಲಿ ನನ್ನ ಹೋರಾಟ ಮುಂದುವರಿಸುತ್ತೇನೆ’ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ಅವರ ವಿಚಾರವಾಗಿ ಹೋರಾಟ ಮಾಡುತ್ತೀರಾ ಎಂಬ ಬಗ್ಗೆ ಕೇಳಿದಾಗ, ‘ಸರ್ಕಾರ ಈಗ ಉತ್ತರ ನೀಡಲಿ, ಸ್ಯಾಂಟ್ರೋ ರವಿ ಆದರೂ ಆಗಲಿ, ಬೇರೆ ರವಿಯಾದರೂ ಆಗಲಿ, ನಾವು ಹೋರಾಟ ಮಾಡುತ್ತೇವೆ. ಆತನ ಹೆಂಡತಿ ಮಾಡಿರುವ ಎಫ್ಐಆರ್ ನಲ್ಲಿನ ಅಂಶ ನೋಡಿದರೆ ನಮಗೆ ಹೇಳಲು ನಾಚಿಕೆಯಾಗುತ್ತದೆ. ಅಂತಹವರ ಬಳಿ ನಮ್ಮ ಅಧಿಕಾರಿಗಳು ಕಾಲಿಗೆ ಬೀಳುತ್ತಿದ್ದಾರೆ. ಈ ಸರ್ಕಾರ ಇವನ ಮೂಲಕ ಬಂದರೆ ನಿಮ್ಮ ಕೆಲಸ ಆಗುತ್ತದೆ ಎಂದು ತೋರಿಸಿದ್ದು, ಹೀಗಾಗಿ ಅಧಿಕಾರಿಗಳು ಅವನ ಕಾಲಿಗೆ ಬೀಳುವ ಪರಿಸ್ಥಿತಿ ತಂದಿದ್ದು ಬ್ರೋಕರ್ ಜನತಾ ಪಕ್ಷವಲ್ಲವೇ?’ ಎಂದು ತಿಳಿಸಿದರು.
ಉದ್ಯಮಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಮನೆಗೆ ನಮ್ಮ ನಾಯಕರಾದ ರಣದೀಪ್ ಸುರ್ಜೆವಾಲ ಅವರು, ಸಿದ್ದರಾಮಯ್ಯ ಅವರು ಸೇರಿದಂತೆ ಇತರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅವರಿಗೆ ಸೂಕ್ತ ನ್ಯಾಯ ಒದಗಿಸಲು ಭರವಸೆ ನೀಡಿದ್ದೇವೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದು, ಈಶ್ವರಪ್ಪ ಅವರ ವಿಚಾರಣೆ ಮಾಡದೇ ಕ್ಲೀನ್ ಚಿಟ್ ನೀಡಿದ್ದಾರೆ. ಕ್ಲೀನ್ ಚಿಟ್ ಸಿಕ್ಕ ತಕ್ಷಣವೇ ನಾನು ಮದುಮಗನಂತೆ ಸಚಿವನಾಗಲು ಸಿದ್ಧನಾಗಿದ್ದೇನೆ ಎಂದು ಹೇಳುತ್ತಾರೆ. ಅರವಿಂದ ಲಿಂಬಾವಳಿ ಅವರ ವಿಚಾರವೂ ಆಗಿದೆ. ನೀವು ಎ3 ಆರೋಪಿಯಾಗಿದ್ದರೆ ಇಷ್ಟು ಹೊತ್ತಿಗೆ ಎಷ್ಟು ಬಾರಿ ವಿಚಾರಣೆ ಮಾಡುತ್ತಿದ್ದರು? ರಾಜ್ಯದಲ್ಲಿ ಬಿಜೆಪಿಯವರಿಗೇ ಒಂದು ಕಾನೂನು, ಉಳಿದಂತೆ ವಿರೋಧ ಪಕ್ಷದವರು ಹಾಗೂ ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತೆ ಎರಡು ಕಾನೂನು ಜಾರಿಯಲ್ಲಿದೆ’ ಎಂದರು.
BREAKING NEWS : ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ |Bomb threat
BIGG NEWS : ವಿಧಾನಸೌಧದಲ್ಲಿ 10.5 ಲಕ್ಷ ನಗದು ಪತ್ತೆ ಪ್ರಕರಣ : ಜೆ.ಜಗದೀಶ್ ಪರ ವಕೀಲ ಹೇಳಿದ್ದೇನು..?