ದಕ್ಷಿಣಕನ್ನಡ : ” ಕೋಮುವಾದದ ಬೀಜ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್ “ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಹರೇಕಳ ಕಡವಿನ ಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಜನರಿಗೆ ಕೊಟ್ಟ ಭರವಸೆ ಮರೆತು ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಕೋಮುವಾದದ ಬೀಜ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್”ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಆರ್ ಎಸ್ ಎಸ್ ಮುಖ್ಯಮಂತ್ರಿಯಲ್ಲ. ಅಲ್ಪಸಂಖ್ಯಾತರ ಕೊಲೆಯಾದ ಮನೆಗೇ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಇರದ ಆರ್ ಎಸ್ ಎಸ್ ನವರು ರಾಷ್ಟ್ರಭಕ್ತಿ ಬಗ್ಗೆ ಮಾತನಾಡಲು ನೈತಿಕತೆಯ ಇಲ್ಲದವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.