ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಬಾಂಬ್ ಇರೋದಾಗಿ ಬೆದರಿಕೆ ಕರೆಯನ್ನು ಮಾಡಿದ್ದಂತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಬೆಳಿಗ್ಗೆ 11ಕ್ಕೆ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿದ್ದಂತ ಆರೋಪಿ ಸುನೀಲ್, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಬಾಂಬ್ ಇರೋದಾಗಿ ಹೇಳಿದ್ದನು.
ಆರೋಪಿ ಕರೆಯಿಂದಾಗಿ ಅಲರ್ಟ್ ಆಗಿದ್ದಂತ ಪೊಲೀಸರು ತಪಾಸಣೆ ನಡೆಸಿದಾಗ ಇದೊಂದು ಹುಸಿ ಕರೆ ಎಂಬುದಾಗಿ ತಿಳಿದು ಬಂದಿತ್ತು. ಹೀಗಾಗಿ ಕರೆಯ ಜಾಡು ಹಿಡಿದು ತನಿಖೆಗೆ ವಿಧಾನಸೌಧ ಪೊಲೀಸರು ಇಳಿದರು.
ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆಗೆ ಬಂದಿದ್ದಂತ ಕರೆ ಮಾಡಿದಾತ ಕಾಡುಗೋಡಿ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದಂತ ಸುನೀಲ್ ಎಂಬುದಾಗಿ ಪತ್ತೆ ಹಚ್ಚಿದರು. ಈ ಬಳಿಕ ಆತನನ್ನು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದರಿಂದ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮಂಡ್ಯದ ಮದ್ದೂರು ಕ್ಷೇತ್ರದ ಪ್ರತಿ ಮನೆಗೆ ಸಂಕ್ರಾಂತಿ ಗಿಫ್ಟ್: ಸೀರೆ, ಬಾಗೀನ ವಿತರಣೆಗೆ ಕದಲೂರು ಉದಯ್ ಚಾಲನೆ
ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರ: ಆರೋಪಿ ಚೈನ್ನೈನಲ್ಲಿ ಬಂಧನ