ತ್ರಿಪುರ: ಜನವರಿ 1, 2024ರೊಳಗೆ ಅಯೋಧ್ಯೆ ರಾಮ ಮಂದಿರ ( Ayodhya Ram Mandir ) ಸಾರ್ವನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಹೀಗಾಗಿ ನಿಮ್ಮ ಪ್ರವಾಸದ ಟಿಕೆಟ್ ಗಳನ್ನು ಬುಕ್ ಮಾಡಿಕೊಂಡು ಇಟ್ಟುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತ್ರಿಪುರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, 2024 ರ ಜನವರಿ 1 ರೊಳಗೆ ಅಯೋಧ್ಯೆಯ ರಾಮಮಂದಿರಕ್ಕೆ ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವಂತೆ ಜನರನ್ನು ಆಹ್ವಾನಿಸಿದರು.
ದೇಶದ ಸ್ವಾತಂತ್ರ್ಯದ ನಂತರ ರಾಮ ಮಂದಿರ ವಿವಾದವನ್ನು ಹಳಿತಪ್ಪಿಸಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಮ್ಯುನಿಸ್ಟರು ಮೂರು ದಶಕಗಳ ಕಾಲ ತ್ರಿಪುರ ರಾಜ್ಯವನ್ನು ಆಳಿದರು. ಆದರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ ದೇಶದಿಂದ ನಿರ್ಗಮಿಸಿದ್ದರೆ, ಕಮ್ಯುನಿಸ್ಟರು ಜಗತ್ತನ್ನು ತೊರೆದಿದ್ದಾರೆ. ಈಶಾನ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್ 2023ರಲ್ಲಿ ನಿಗದಿಯಾಗಿವೆ ಎಂದರು.
ಸಿಎಂ ಬೊಮ್ಮಾಯಿಯವರೇ ವಿಧಾನಸೌಧದಲ್ಲಿ ಸಿಕ್ಕ ಹಣ ಯಾವುದು? ಉತ್ತರಿಸಿ: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ
BREAKING NEWS: ಕೇಂದ್ರದ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ, ಮೈಸೂರು ಆಯ್ಕೆ
‘ಸಂಕ್ರಾಂತಿ’ ಯಾವಾಗ.? ಜನವರಿ 14ಕ್ಕಾ.? ಅಥ್ವಾ 15ಕ್ಕಾ.? ಯಾವ ದಿನ ಆಚರಿಸ್ಬೇಕು.? ಇಲ್ಲಿದೆ ಮಾಹಿತಿ.!