ಬಳ್ಳಾರಿ : ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಎದುರು ನಾಯಿಯಂತೆ ಇರ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಿಪಕ್ಷ ನಾಯಕ ಸಿದ್ದರಾಮಯ್ಯರ ವ್ಯಕ್ತಿತ್ವ ತೋರಿಸುತ್ತೆ. ನಾಯಿ ನಿಯತ್ತಿನ ಪ್ರಾಣಿ ಎಂಬುದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಸಿದ್ದರಾಮಯ್ಯ ಹೇಳಿಕೆಗೆ ನಾಡಿನ ಜನರು ಉತ್ತರ ಕೊಡುತ್ತಾರೆ. ನಾನು ನಿಯತ್ತಾಗಿ ಸರ್ಕಾರ ನಡೆಸುತ್ತಿದ್ದೇನೆ. ಸಿದ್ದರಾಮಯ್ಯ ರೀತಿ ಸುಳ್ಳು ಹೇಳಿಕೊಂಡು ನಾನು ತಿರುಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿಯ ಕಾರ್ಯಕ್ರಮದಲ್ಲಿ ಮಾತನಾಡಿದಂತ ಸಿದ್ದರಾಮಯ್ಯ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ರೆ ಕೇಂದ್ರ ಸರ್ಕಾರದಿಂದ ಅನುದಾನ ತರಲಿ, ಪ್ರಧಾನಿ ಮೋದಿ ಬಳಿ ನಾಯಿಯಂತೆ ಇರ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
BIG NEWS : ಮುಂದಿನ ತಿಂಗಳಿನಿಂದ ಈ ಕಂಪ್ಯೂಟರ್ಗಳಲ್ಲಿ ʻGoogle Chromeʼ ಕೆಲಸ ನಿರ್ವಹಿಸೋದಿಲ್ಲ… ಕಾರಣ?