ಪಿಲಿಭಿತ್(ಉತ್ತರ ಪ್ರದೇಶ): ನೆರೆಹೊರೆಯ ಕಾಮುಕನೊಬ್ಬ ಹೊಸ ವರ್ಷದಂದೇ 18 ವರ್ಷದ ಯುವತಿಯನ್ನು ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಜೆಹಾನಾಬಾದ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸ ವರ್ಷದ ಮುಂಜಾನೆ ಈ ಘಟನೆ ಸಂಭವಿಸಿದೆ. ಈ ಕಾಮುಕ ಯುವತಿಯನ್ನು ತನ್ನ ಮನೆಗೆ ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ತೀವ್ರವಾಗಿ ಥಳಿಸಿ, ವಿಷವುಣಿಸಿದ್ದಾನೆ ಎಂದು ತಿಳಿದುಬಂದಿದೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಪಿಲಿಭಿತ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಆರೋಪಿ ಕಮಲ್, ಆತನ ಸಹೋದರ ಸಂಜು, ಸಹೋದರಿ ಶೀತಲ್, ತಾಯಿ ಮಾಯಾದೇವಿ ಮತ್ತು ತಂದೆ ಸತ್ಯಪಾಲ್ ವಿರುದ್ಧ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಮಂಗಳವಾರ ಸಂಜೆ ಪ್ರಕರಣ ದಾಖಲಿಸಲಾಗಿದೆ ಎಂದು ಜೆಹನಾಬಾದ್ನ ಪ್ರಭಾರಿ ಇನ್ಸ್ಪೆಕ್ಟರ್ (ಎಸ್ಎಚ್ಒ) ಕೊತ್ವಾಲಿ ಪ್ರಭಾಷ್ ಕುಮಾರ್ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೇ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS : ʻದ್ವೇಷ ಭಾಷಣ ವ್ಯಕ್ತಿಯ ಗೌರವದ ಹಕ್ಕನ್ನು ಕಸಿದುಕೊಳ್ಳುತ್ತದೆʼ: ಸುಪ್ರೀಂ ನ್ಯಾಯಮೂರ್ತಿ ಬಿ ವಿ ನಾಗರತ್ನ
ಮಾರಣಾಂತಿಕ ʻಮೆದುಳಿನ ಹುಣ್ಣುʼಗಳಿಗೆ ʻಬಾಯಿಯ ಸೋಂಕುʼ ಕಾರಣವೇ?: ಸಂಶೋಧಕರು ಹೇಳಿದ್ದೇನು ನೋಡಿ
BIG NEWS : ʻದ್ವೇಷ ಭಾಷಣ ವ್ಯಕ್ತಿಯ ಗೌರವದ ಹಕ್ಕನ್ನು ಕಸಿದುಕೊಳ್ಳುತ್ತದೆʼ: ಸುಪ್ರೀಂ ನ್ಯಾಯಮೂರ್ತಿ ಬಿ ವಿ ನಾಗರತ್ನ
ಮಾರಣಾಂತಿಕ ʻಮೆದುಳಿನ ಹುಣ್ಣುʼಗಳಿಗೆ ʻಬಾಯಿಯ ಸೋಂಕುʼ ಕಾರಣವೇ?: ಸಂಶೋಧಕರು ಹೇಳಿದ್ದೇನು ನೋಡಿ