ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 2 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 60,000 ಸಂಬಳ ನೀಡಲಾಗುತ್ತದೆ. ಜನವರಿ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲೇ ಕೆಲಸ ಮಾಡಲು ಅಭ್ಯರ್ಥಿಗಳು ಸಿದ್ದರಿರಬೇಕಾಗಿದ್ದು, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 31, 2022ಕ್ಕೆ ಗರಿಷ್ಠ 62 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅಭ್ಯರ್ಥಿಗಳು ತುಂಬಿದ ಅರ್ಜಿಯನ್ನು ಜನರಲ್ ಮ್ಯಾನೇಜರ್ (ಎಚ್ಆರ್)ಮಾನವ ಸಂಪನ್ಮೂಲ ಇಲಾಖೆ,2ನೇ ಬ್ಲಾಕ್, ಸರ್ಜಾಪುರ ರಸ್ತೆಕೋರಮಂಗಲ, ಬೆಂಗಳೂರು-560034 ಇಲ್ಲಿಗೆ ಕಳುಹಿಸಬಹುದಾಗಿದೆ.
BIGG NEWS : ಅಗಲಿದ ಸಂತನಿಗೆ ಲಕ್ಷಾಂತರ ಭಕ್ತರಿಂದ ಭಾವಪೂರ್ಣ ವಿದಾಯ |Siddeshwara Swamiji