ಬೆಂಗಳೂರು: ವಿದೇಶಗಳಲ್ಲಿ ಬಿಎಫ್.7 ಕೋವಿಡ್ ರೂಪಾಂತರಿ ಹೆಚ್ಚಳವಾಗುತ್ತಿದ್ದಂತೇ, ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸೋ ವಿದೇಶಿಗರಿಗೆ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಹೀಗೆ ಪರೀಕ್ಷೆಗೆ ಒಳಪಟ್ಟಂತ ಚೀನಾದಿಂದ ರಾಜ್ಯಕ್ಕೆ ಬಂದ ಯಾರಿಗೂ ಬಿಎಫ್.7 ಪತ್ತೆಯಾಗಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಸ್ಪಷಅಟ ಪಡಿಸಿದೆ. ಈ ಮೂಲಕ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕ ಡಾ.ಮಹಮ್ಮದ್ ಶರೀಫ್ ಮಾಹಿತಿ ನೀಡಿದ್ದು, ಚೀನಾದಿಂದ ರಾಜ್ಯಕ್ಕೆ ಆಗಮಿಸಿದ ವಿದೇಶಿಗರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಅವರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಹೊಸ ರೂಪಾಂತರಿ ಬಿಎಫ್.7 ತಳಿ ಪತ್ತೆಯಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ ಎಂದಿದೆ.
ಅಂದಹಾಗೇ ಡಿಸೆಂಬರ್ 24ರಿಂದ ವಿದೇಶದಿಂದ ಆಗಮಿಸಿದಂತವರ ಪೈಕಿ 23 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಅವರ ಮಾದರಿಯನ್ನು ವಂಶವಾಹಿನಿ ಪತ್ತೆ ಪರೀಕ್ಷೆಗೆ ಕಳುಹಿಸಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಈ ಹಿಂದಿನ ಒಮಿಕ್ರಾನ್ ತಳಿ ತಗುಲಿರುವುದು ಪತ್ತೆಯಾಗಿದೆಯೇ ವಿನಹ, ಹೊಸ ತಳಿಯಾದ ಬಿಎಫ್.7 ದೃಢಪಟ್ಟಿಲ್ಲ.
ಶಿವಮೊಗ್ಗ: ಜ.6ರಂದು ನಗರದ ಈ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ | Power Cut