ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ವಿಜಯಪುರದಲ್ಲಿ ಸೈನಿಕ ಶಾಲೆ ಆವರಣದಲ್ಲಿ ಸಿದ್ದೇಶ್ವರ ಶ್ರೀ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ಆರಂಭವಾಗಿದೆ.
ಕೆಲವೇ ಕ್ಷಣಗಳಲ್ಲಿ ‘ಸಿದ್ದೇಶ್ವರ’ ಶ್ರೀಗಳಿಗೆ ಸರ್ಕಾರಿ ಗೌರವ ನಮನ ಸಲ್ಲಿಕೆಯಾಗಲಿದ್ದು, ಗೌರವ ನಮನ ಸಲ್ಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಪೊಲೀಸರು ಕುಶಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಿದ್ದು, ನಂತರ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆ ಸೈನಿಕ ಶಾಲೆಯ ಗೇಟ್ ಬಂದ್ ಮಾಡಲಾಗಿದೆ. ಇದಾದ ಬಳಿಕ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಶ್ರೀಗಳನ್ನು ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಿಸಿ ಅಗ್ನಿಸ್ಪರ್ಶ ಮಾಡಲು ಸಕಲ ಸಿದ್ದತೆ ನಡೆಸಲಾಗಿದ್ದು, ಬಲಭಾಗಕ್ಕೆ ಸಿಎಂ ಸೇರಿ ವಿಐಪಿಗಳಿಗೆ ಕೂರಲು ಅವಕಾಶ ಮಾಡಿಕೊಡಲಾಗಿದೆ. 1000 ಜನರಿಗೆ ಶ್ರೀಗಳ ವಿಧಿ ವಿಧಾನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನೂ, ಭಕ್ತರಿಗೆ ಎಲ್ ಇಡಿ ಸ್ಕ್ರೀನ್ ಮೂಲಕ ಅಂತಿಮ ಕ್ರಿಯೆ ನೋಡುವ ಅವಕಾಶ ನೀಡಲಾಗಿದೆ. ವಿಧಿ ವಿಧಾನ ನೆರವೇರುವ ಜಾಗದಲ್ಲಿ ಭಕ್ತರು ರಂಗೋಲಿ ಬಿಡಿಸುತ್ತಿದ್ದಾರೆ.ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ವಿಜಯಪುರದಲ್ಲಿ ಸೈನಿಕ ಶಾಲೆ ಆವರಣದಲ್ಲಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ , ಪ್ರಹ್ಲಾದ್ ಜೋಶಿ ಸೇರಿ ಹಲವರು ಅಂತಿಮ ದರ್ಶನ ಪಡೆದರು.
‘ಭೂತಾರಾಧನೆ’ ಬಗ್ಗೆ ನಟ ಕಿಶೋರ್ ಪೋಸ್ಟ್ ವೈರಲ್ : ಕಿಡಿಕಾರಿದ ನೆಟ್ಟಿಗರು
BIGG NEWS : ‘ಸಿದ್ದೇಶ್ವರ ಶ್ರೀ’ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ಆರಂಭ