ಬೆಂಗಳೂರು : ಇತ್ತೀಚೆಗಂತೂ ರಸ್ತೆಗಳಲ್ಲಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದೆ. ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಲೇ ಇರುತ್ತಾರೆ , ಇತ್ತೀಚೆಗಷ್ಟೇ ಆಂದ್ರಪ್ರದೇಶದ ವಿಶಾಖಪಟ್ಟಣಂನಳ್ಳೀ ಹಾಡಹಗಲೇ ಕಾಲೇಜು ಹುಡುಗಿಯನ್ನು ಯುವಕನೊಬ್ಬ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಕೂರಿಸಿ ಕಿಸ್ ಮಾಡಿದ ಘಟನೆ ನಡೆದಿತ್ತು.
ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಂತಹದ್ದೇ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಹೆಲ್ಮೆಟೂ ಹಾಕದೆ ಪ್ರೇಮಿಗಳು ಹುಚ್ಚಾಟ ನಡೆಸಿದ್ದಾರೆ. ಹಿಂಬದಿ ಕಾರ್ ಪ್ರಯಾಣಿಕರ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ.
ಬೆಂಗಳೂರಿನ ಆರ್ ಆರ್ ನಗರದ ಫ್ಲೈ ಓವರ್ ಮೇಲೆ ಘಟನೆ ನಡೆದಿದ್ದು, ಗಾಡಿ ಓಡಿಸುತ್ತಿದ್ಗ ಹುಡುಗಿಯ ಹಿಂದಿನ ಸೀಟಿನಲ್ಲಿ ಹುಡುಗ ಕೂತಿದ್ದಾನೆ. ನಡು ರಸ್ತೆಯಲ್ಲಿ ಹುಡುಗ ಹುಡುಗಿಗೆ ಮುತ್ತಿನ ಸುರಿಮಳೆ ಸುರಿಸಿದ್ದಾನೆ. ಹಿಂದೆ ಬರುತ್ತಿದ್ದ ಕಾರಿನ ಚಾಲಕ ರೊಮ್ಯಾನ್ಸ್ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.
ಆಂಧ್ರದಲ್ಲೂ ರೋಡ್ ರೋಮಿಯೋ ರೊಮ್ಯಾನ್ಸ್
ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ಹಾಡಹಗಲೇ ಯುವಕನೊಬ್ಬ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಕೂರಿಸಿ ವಿಚಿತ್ರವಾಗಿ ಪ್ರೀತಿ ನಿವೇದನೆ ಮಾಡುವುದಕ್ಕೆ ಮುಂದಾಗ ವಿಚಿತ್ರವಾದ ವಿಡಿಯೋವೊಂದನ್ನು ಕಾರಿನಲ್ಲಿ ಹಾದುಹೋಗುವ ಜನರು ಚಿತ್ರೀಕರಿಸಿದ್ದಾರೆ.
ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಈ ಘಟನೆ ನಡೆದ ಎರಡೇ ಗಂಟೆಗಳಲ್ಲಿ ಸ್ಟೀಲ್ ಪ್ಲಾಂಟ್ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ನಂತರ ಅವರ ಹೆತ್ತವರನ್ನು ಕರೆದು ಸಲಹೆ ನೀಡಲಾಯಿತು. ಇಬ್ಬರನ್ನು ಗಾಜುವಾಕಾ ಬಳಿಯ ವೆಂಪಲಿನಗರ ಮತ್ತು ಸಮತಾನಗರದ ನಿವಾಸಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.
ಫೋನ್ ನಲ್ಲಿ ‘ಪ್ರಧಾನಿ ಮೋದಿ’ ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ ‘ಸಿದ್ದೇಶ್ವರ ಶ್ರೀ’ಗಳು
BIGG NEWS: ಬೆಂಗಳೂರು ಜನರೇ ಎಚ್ಚರ….!; ಮೊಬೈಲ್ ತಗೊಂಡು ವ್ಯಕ್ತಿಗೆ ಪಂಗನಾಮ ಹಾಕಿದ ಭೂಪ