ಒಡಿಶಾ : ಮಂಗಳವಾರ ಒಡಿಶಾದಲ್ಲಿ ಮತ್ತೊಬ್ಬ ರಷ್ಯನ್ ಶವ ಪತ್ತೆಯಾಗಿದ್ದು, ಹದಿನೈದು ದಿನಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ ರಷ್ಯಾದ ಪ್ರಜೆಯ ಶವ ಪತ್ತೆಯಾಗಿದೆ. ಮೃತರನ್ನು ಹಡಗಿನ ಮುಖ್ಯ ಇಂಜಿನಿಯರ್ ಮಿಲಿಯಾಕೋವ್ ಸೆರ್ಗೆ ಎಂದು ಗುರುತಿಸಲಾಗಿದೆ. ಮುಂಜಾನೆ 4.30ರ ಸುಮಾರಿಗೆ ಹಡಗಿನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಘಟನೆ ಸಂಬಂಧ ಪರದೀಪ್ ಬಂದರು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪಾರಾದೀಪ್ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿ ಎಲ್ ಹರಾನಂದ್ ಅವರು ರಷ್ಯಾದ ಎಂಜಿನಿಯರ್ ಸಾವನ್ನು ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ನ ಉತ್ತರಾರ್ಧದಲ್ಲಿ ದಕ್ಷಿಣ ಒಡಿಶಾದ ರಾಯಗಡ ಪಟ್ಟಣದಲ್ಲಿ ಶಾಸಕರು ಸೇರಿದಂತೆ ಇಬ್ಬರು ರಷ್ಯಾದ ಪ್ರವಾಸಿಗರು ನಿಗೂಢ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಷ್ಯಾದಲ್ಲಿ ಶಾಸಕರಾಗಿರುವ ಪಾವೆಲ್ ಆಂಟೊವ್ (65) ಅವರು ಡಿಸೆಂಬರ್ 24 ರಂದು ಹೋಟೆಲ್ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರೆ, ಅವರ ಸ್ನೇಹಿತ ವ್ಲಾಡಿಮಿರ್ ಬಿಡೆನೋವ್ (61) ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಎರಡೂ ಪ್ರಕರಣಗಳನ್ನು ಒಡಿಶಾ ಪೋಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
Dengue Fever: ʻಡೆಂಗ್ಯೂ ಜ್ವರʼದ ಚಿಹ್ನೆಗಳು, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ, ರೋಗದಿಂದ ದೂರವಿರಿ!
‘ವ್ಯಕ್ತಿ ಶಾಶ್ವತವಲ್ಲ, ಚಿಂತನೆಗಳು ಶಾಶ್ವತ’ : ‘ಸಿದ್ದೇಶ್ವರ ಶ್ರೀ’ ನಿಧನಕ್ಕೆ ವಿರೇಂದ್ರ ಹೆಗ್ಗಡೆ ಸಂತಾಪ