ಕೊಪ್ಪಳ: ಕೊಪ್ಪಳದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು,ಇದಿಗ ಚುನಾವಣೆ ಯಾವ ರೀತಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಗುರುತಿಸಬೇಕು. ಮತದಾರರನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 150 ಸ್ಥಾನ ಗೆಲ್ಲಲು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕರೆ ನೀಡಿದ್ದಾರೆ ಎಂದರು.
ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಂದ ನಂತರ ಬಿಜೆಪಿ ಸಂಘಟನೆ ಬಲವಾಗಿದೆ. ಕಟ್ಟ ಕಡೆಯ ಕಾರ್ಯಕರ್ತನ ಧ್ವನಿಯೂ ಗೆದ್ದು ಬರುವ ವ್ಯಕ್ತಿಗೆ ಗೊತ್ತಾಗಬೇಕು.
BIGG NEWS: ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತನಿಗೆ ಗಂಭೀರ ಗಾಯ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಬೂತ್ ವಿಜಯ ಅಭಿಯಾನ ದೇಶದ ಹಾಗೂ ರಾಜ್ಯದಲ್ಲಿ ನಡೆದಿದೆ.ಕಾರ್ಯಕರ್ತನ ಕೂಗು ಮೇಲ್ಮಟ್ಟದಲ್ಲಿ ಮುಟ್ಟುವಂತ ಗಟ್ಟಿತನದಲ್ಲಿ ಪಕ್ಷ ಮಾಡಿದೆ. ಬೇರೆ ಪಕ್ಷದಲ್ಲಿ ಈ ರೀತಿಯ ಬೂತ್ ವಿಜಯ ಎನ್ನುವ ಮಾತಿಲ್ಲ. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
BIGG NEWS: ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತನಿಗೆ ಗಂಭೀರ ಗಾಯ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ