ನವದೆಹಲಿ: 500 ಮತ್ತು 1,000 ರೂ.ಗಳ ನೋಟುಗಳನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಪೀಠವು ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ.
BIG NEWS : ಲಕ್ನೋದಲ್ಲಿ ಭಾರೀ ಚಳಿ ಗಾಳಿ : ಶಾಲಾ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬದಲಾವಣೆ
ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಸಿಂಧುತ್ವವವನ್ನು ಎತ್ತಿಹಿಡಿದಿದೆ. ಇಂತಹ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಇದು ಆರ್. ಬಿಐ ಮತ್ತು ಸರ್ಕಾರದ ನಡುವಿನ ಚರ್ಚೆಯಾಗಿದೆ.ಇಂತಹ ನಿರ್ಧಾರವನ್ನು ಸಂಸತ್ ತೆಗೆದುಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್
2016 ರಲ್ಲಿ ನೋಟು ಅಮಾನ್ಯೀಕರಣದ ಬಗ್ಗೆ ಕೇಂದ್ರದ ಅಧಿಸೂಚನೆಯ ವಿರುದ್ಧ ನ್ಯಾಯಾಲಯದಲ್ಲಿ 50 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಡಿಸೆಂಬರ್ 7 ರಂದು, ನ್ಯಾಯಪೀಠವು ಸರ್ಕಾರ ಮತ್ತು ಅರ್ಜಿದಾರರ ವಾದಗಳನ್ನು ಆಲಿಸಿದ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನೋಟು ಅಮಾನನೀಕರಣ ನಿರ್ಧಾರವು ನಿರಂಕುಶ, ಅಸಾಂವಿಧಾನಿಕ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯಡಿ ಸೂಚಿಸಲಾದ ಅಧಿಕಾರಗಳ ದುರುಪಯೋಗವಾಗಿದೆ ಎಂದು ಅರ್ಜಿಗಳು ವಾದಿಸಿದವು.
Supreme Court upholds the decision of the Central government taken in 2016 to demonetise the currency notes of Rs 500 and Rs 1000 denominations. pic.twitter.com/sWT70PoxZX
— ANI (@ANI) January 2, 2023