ಬಾರ್ಮರ್: ರಾಜಸ್ಥಾನದ ಬಾರ್ಮರ್ನಲ್ಲಿ ಬೀದಿ ನಾಯಿಯೊಂದು ಕೇವಲ ಎರಡು ಗಂಟೆಗಳಲ್ಲಿ ನಲವತ್ತು ಜನರಿಗೆ ಕಚ್ಚಿದ್ದು, ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ಆಜ್ ತಕ್ ವರದಿ ಮಾಡಿದೆ.
BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮೆಗಾ ಡೈರಿ ಉದ್ಘಾಟನೆ’
ನಾಯಿ ಕಡಿತಕ್ಕೊಳಗಾದ ಜನರು ಸಮೀಪದ ಆಸ್ಪತ್ರೆಗೆ ಬರುತ್ತಿದ್ದಂತೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಜನರಿಂದ ತುಂಬಿ ತುಳುಕುತ್ತಿದ್ದು, ನಾಯಿ ಕಚ್ಚಿ ಗಾಯಗಳಾಗಿದ್ದು, ಅನಾಹುತದ ತೀವ್ರತೆ ಬಯಲಾಗಿದೆ. ಬಾರ್ಮರ್ ಜಿಲ್ಲೆಯ ಕಲ್ಯಾಣಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮೆಗಾ ಡೈರಿ ಉದ್ಘಾಟನೆ’
ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಡಳಿತ ಮಂಡಳಿಯೂ ತಬ್ಬಿಬ್ಬಾಯಿತು. ಕೂಡಲೇ ನಗರಸಭೆಗೆ ಮಾಹಿತಿ ನೀಡಿದ್ದು, ನಾಯಿ ಹಿಡಿಯಲು ಎರಡು ತಂಡಗಳನ್ನು ರಚಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ನೆರವಿನಿಂದ ಬೀದಿ ನಾಯಿಯನ್ನು ಹಿಡಿಯಲಾಯಿತು.
ಇದೀಗ ನಗರದ ವಿವಿಧ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯಲು ನಗರಸಭೆ ಮುಂದಾಗಿದೆ. ಹಠಾತ್ ಬೀದಿನಾಯಿ ಕಡಿತದಿಂದ ಗಾಯಗೊಂಡ ಅನೇಕ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಲ್.ಮನ್ಸೂರಿಯಾ ತಿಳಿಸಿದ್ದಾರೆ.