ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ಬೃಹತ್ ಗಾತ್ರದ ತೆಂಗಿನ ಕಾಯಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಾಗಿದೆ.
ಸರ್ಜಾಪುರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಉರುಳಿ ಬಿದ್ದಿದೆ. ಪರಿಣಾಮ 2 ವರ್ಷದ ಸಂಪ್ರೀತ್ ಎಂಬ ಮಗುವಿನ ತಲೆ ಮೇಲೆ ಕಾಯಿ ಬಿದ್ದಿದ್ದು. ಮಗು ತಲೆಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಕೂಡಲೇ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಗುವಿನ ತಲೆ ಬುರುಡೆ ಮುರಿದ ಹಿನ್ನೆಲೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಬದುಕಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಸಂಗೊಳ್ಳಿ ರಾಯಣ್ಣ’ ಸೇರಿ ನಾಲ್ಕು ಪ್ರತಿಮೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ