ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದೆ. ಈ ವೇಳೆ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನಕ್ಕೂ ಮುಂದಾಗಿರುವ ಘಟನೆ ನಡೆದಿದೆ.
BREAKING NEWS: ವಿದೇಶದಿಂದ ಬೆಂಗಳೂರಿಗೆ ಬಂದ 3 ಮಂದಿಗೆ ಕೊರೊನಾ; ಜನವರಿ ವೇಳೆಗೆ ಕೋವಿಡ್ 4ನೇ ಅಲೆ ಬರುವ ಸಾಧ್ಯತೆ
ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿತ್ತು. ಆದರೆ ನಿನ್ನೆ ಮಾತ್ರ ಆ ಜಗಳ ತಾರಕ್ಕೇರಿದ್ದು ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಪೆಟ್ಟುಯಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ.