ಬೆಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಖಾಕಿ ಕಣ್ಗಾವಲು ಹಾಕಿದೆ.
ಹೌದು, ನ್ಯೂ ಇಯರ್ ದಿನ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರ ಪೊಲೀಸರು ಡ್ರೋನ್ ಕಣ್ಗಾವಲಿನ ಮೊರೆ ಹೋಗಿದ್ದಾರೆ . ಮೋಜು ಮಸ್ತಿಯಲ್ಲಿ ಮನಸ್ಸಿಗೆ ಬಂದ ಹಾಗೆ ವರ್ತಿಸಿದ್ರೆ, ಸುಖಾ ಸುಮ್ಮನೆ ಕಿರಿಕ್ ಮಾಡುವವರಿಗೆ, ಕುಡಿದ ಮತ್ತಿನಲ್ಲಿ ಬೇಕಾ ಬಿಟ್ಟಿ ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲು ಹೆಚ್ಚಿನ ಸಿಸಿ ಕ್ಯಾಮೆರಾ ಮತ್ತು ಡ್ರೋನ್ ಕಣ್ಗಾವಲು ಇರಲಿದೆ. ಈಗಾಗಲೆ ರೌಡಿ ಶೀಟರ್ಗಳಿಗೆ ಪೊಲೀಸರು ವಾರ್ನ್ ಮಾಡಿದ್ದು, ಹೊಸ ವರ್ಷದಂದು ಕಿರಿಕ್, ತಗಾದೆ ತೆಗೆಯದಂತೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನೂ, ಹೊಸ ವರ್ಷದಿಂದ ಕುಡಿದು, ಕುಣಿದು ಕುಪ್ಪಳಿಸುವ ಜನರೇ ಹೆಚ್ಚು. ಕುಡಿದ ಮತ್ತನಲ್ಲಿ ಏನ್ ಮಾಡ್ತಾರೆ ಅಂತಾ ಅವರಿಗೆ ತಿಳಿದಿರಲ್ಲ. ಹಾಗಾಗಿ ಅವರಿಗೆ ಪೊಲೀಸ್ ಇಲಾಖೆ ಒಂದು ಸೂಕ್ತ ವ್ಯವಸ್ಥೆ ಕಲಿಸಲಾಗಿದೆ. ಹೌದು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿ ಕುಡಿದು ಟೈಟಾದವರಿಗೆ ಪೊಲೀಸ್ ಇಲಾಖೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ.
If you think WE CAN’T SEE YOU, think again 🤷♂️
We are ensuring adequate lighting in crowded areas, increased CCTV and Drone Surveillance during NYE. Let’s all pledge to keep Namma Ooru, Safe Bengaluru 🙌#PolicePublicPartnership 🤝 pic.twitter.com/yY24T31aO0
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 27, 2022
ಯುವಕ, ಯುವತಿ ಯಾರೇ ಕುಡಿದು ಟೈಟಾದ್ರೆ ಅವರ ಸುರಕ್ಷತೆಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಈ ಆ್ಯಂಬುಲೆನ್ಸ್ ಮೂಲಕವೇ ಅವರನ್ನು ಮನೆಗೆ ತಲುಪಿಸಲಾಗುತ್ತೆ. ಡಿಸೆಂಬರ್ 31ರ ರಾತ್ರಿ ಮಾತ್ರ ಈ ಸೇವೆ ಇರಲಿದೆ.ಈ ಮೂಲಕ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ರವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಗ್ನೇಯ ವಿಭಾಗದಲ್ಲಿ ಪಾರ್ಟಿಪ್ರಿಯರ ಸೇಫ್ಟಿಗೆ ಆ್ಯಂಬುಲೆನ್ಸ್ ಸೇವೆಗೆ ಪ್ಲಾನ್ ನಡೆದಿದೆ.
BREAKING NEWS : ಈಜು ಹೊಂಡದಲ್ಲಿ ಮುಳುಗಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಸಾವು
BREAKING NEWS : ರಾಜ್ಯದಲ್ಲಿ ಇಂದು 39 ಜನರಿಗೆ ಕೊರೊನಾ ಸೋಂಕು ಧೃಡ : ಸಕ್ರಿಯ ಪ್ರಕರಣಗಳ ಸಂಖ್ಯೆ 1,275 |COVID 19