ಕೆಎನ್ಎನ್ಡಿಜಿಟಲ್ ಡೆಸ್ಕ್ : ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರು ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಚೀನಾದಿಂದ ದೇಶದ ಮೇಲೆ ಹೆಚ್ಚುತ್ತಿರುವ ಬೆದರಿಕೆಯನ್ನ ಗಮನದಲ್ಲಿಟ್ಟುಕೊಂಡು ತೈವಾನ್ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಅದ್ರಂತೆ, ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಗೆ ತೈವಾನ್ ಸಿದ್ಧವಾಗಬೇಕಾಗಿದೆ ಎಂದು ಅಧ್ಯಕ್ಷ ತ್ಸೈ ಇಂಗ್-ವೆನ್ ಘೋಷಿಸಿದರು.
ಸುದ್ದಿ ಸಂಸ್ಥೆ ಎಎಫ್ಪಿ ಪ್ರಕಾರ, ತೈವಾನ್ನ ಅಧ್ಯಕ್ಷ ತ್ಸೈ ಇಂಗ್-ವೆನ್ ಮಾಧ್ಯಮಗಳಿಗೆ, “ಪ್ರಸ್ತುತ ನಾಲ್ಕು ತಿಂಗಳ ಕಡ್ಡಾಯ ಮಿಲಿಟರಿ ಸೇವೆಯು ವೇಗವಾಗಿ ಮತ್ತು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯನ್ನ ಎದುರಿಸಲು ಸಾಕಾಗುವುದಿಲ್ಲ (ಚೀನಾಕ್ಕೆ ಸಂಬಂಧಿಸಿದಂತೆ) ಅದನ್ನ ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಅದ್ರಂತೆ, ಮಿಲಿಟರಿ ಸೇವೆಯನ್ನ ಒಂದು ವರ್ಷಕ್ಕೆ ಹೆಚ್ಚಿಸಲಾಗಿದೆ” ಎಂದರು.
#BREAKING Taiwan extends mandatory military service to one year: president pic.twitter.com/wcH8Qk9rWC
— AFP News Agency (@AFP) December 27, 2022
Viral Video : ಕೊರೊನಾದಿಂದ ಪಾರಾಗಲು ಚೀನಾ ದಂಪತಿಗಳ ಮಸ್ತ್ ಪ್ಲ್ಯಾನ್, ಮಾಡಿದ್ದೇನು ಗೊತ್ತಾ.?
BIGG NEWS : ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವಕರು, ನ್ಯಾಯಾಂಗವೂ ಯೋಚಿಸಬೇಕು ; ಕಿರಣ್ ರಿಜಿಜು