ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳೇ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದು ಎಷ್ಟೋ ಮಂದಿಗೆ ತಿಳಿಯುವುದಿಲ್ಲ.
ಅದರಲ್ಲೂ ಜಾಯಿಕಾಯಿ ಅಂತೂ ಅಡುಗೆ ಪರಿಮಳಯುಕ್ತವಾಗಿ, ರುಚಿಯಾಗಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಜಾಯಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಯುರ್ವೇದದಲ್ಲಿ, ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜಾಯಿಕಾಯಿಯಲ್ಲಿ ಫೈಬರ್, ಥಯಾಮಿನ್, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಹೇರಳವಾಗಿವೆ.
ಜಾಯಿಕಾಯಿ ಬಳಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಇದು ರಕ್ತ ಪೂರೈಕೆಯನ್ನು ಕೂಡಾ ಸುಧಾರಿಸುತ್ತದೆ. ವರದಿಯ ಪ್ರಕಾರ ಜಾಯಿಕಾಯಿ ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಜಾಯಿಕಾಯಿ ಬಳಸುವುದರಿಂದ ಇನ್ನೂ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೊಣ ಬನ್ನಿ
1. ಜಾಯಿಕಾಯಿಗೆ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಎರಡೂ ದೇಹಕ್ಕೆ ಅಗತ್ಯವಿರುವ ಸ್ನಿಗ್ಧತೆಯ ವಸ್ತುಗಳು.
2. ದುರ್ಬಲ ಲೈಂಗಿಕ ಸಾಮರ್ಥ್ಯ ಮತ್ತು ಬಂಜೆತನ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರಿಗೆ ಜಾಯಿಕಾಯಿ ಬಹಳ ಒಳ್ಳೆಯದು. ಇದು ಲೈಂಗಿಕ ಪ್ರಚೋದನೆಯನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಇದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
3. ದೀರ್ಘಕಾಲದ ಉರಿಯೂತವು ಸಂಧಿವಾತ, ಕೀಲು ನೋವು, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಜಾಯಿಕಾಯಿ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ದೇಹದಲ್ಲಿನ ಉರಿಯೂತವನ್ನು ತೆಗೆದುಹಾಕುತ್ತದೆ.
4. ಕೆಲವೊಂದು ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಅಪಾಯಕಾರಿ ಸೋಂಕನ್ನು ಉಂಟುಮಾಡಬಹುದು. ಆದ್ದರಿಂದ ಜಾಯಿಕಾಯಿಯನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಸೋಂಕುಗಳು ಗುಣವಾಗುತ್ತವೆ. ಜಾಯಿಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಬ್ಯಾಕ್ಟೀರಿಯಾದ ಸೋಂಕಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
5. ಜಾಯಿಕಾಯಿ ನಮ್ಮ ಮೈಂಡ್ ರಿಫ್ರೆಷ್ ಮಾಡುತ್ತದೆ. ಚಳಿಗಾಲದಲ್ಲಿ ಕೆಲವರಿಗೆ ಅಲಸ್ಯದ ಭಾವನೆ ಕಾಡುತ್ತದೆ. ಇದು ಋತುಮಾನದ ಅಸ್ವಸ್ಥತೆ ಎನ್ನಬಹುದು. ಜಾಯಿಕಾಯಿ ಸೇವಿಸುವುದರಿಂದ ಮೈಂಡ್ ರಿಫ್ರೆಶ್ ಆಗುತ್ತದೆ. ಇದು ಖಿನ್ನತೆಗೆ ಶಮನಕಾರಿ ಔಷಧಿಯಂತೆ ಕೆಲಸ ಮಾಡುತ್ತದೆ ಮತ್ತು ಒತ್ತಡವನ್ನೂ ನಿವಾರಿಸುತ್ತದೆ.