ನವದೆಹಲಿ : ಹಿಂದಿ ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆಕೆಯ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿದೆ.
ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಖಾನ್, ಶ್ರದ್ಧಾ ವಾಕರ್ ಹತ್ಯೆ ಕೇಸ್ ನಿಂದ ಒತ್ತಡಕ್ಕೊಳಗಾಗಿದ್ದೆ, ಧರ್ಮದ ಕಾರಣದಿಂದ ತುನೀಶಾ ಜೊತೆ ಸಂಬಂಧವನ್ನು ಮುರಿದುಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆಯ ಸಮಯದಲ್ಲಿ, ತುನೀಶಾ ಈ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆ ವೇಳೆ ಆಕೆಯನ್ನು ರಕ್ಷಿಸಿದ್ದೆ ಎಂದು ಶೀಜಾನ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಶನಿವಾರ ಧಾರಾವಾಹಿಯ ಸೆಟ್ನಲ್ಲಿ ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಟಿಯ ತಾಯಿ ತನ್ನ ಮಗಳು ಮತ್ತು ಶೀಜಾನ್ ಖಾನ್ ಪ್ರೀತಿಸುತ್ತಿದ್ದರು. ತನ್ನ ಮಗಳ ಆತ್ಮಹತ್ಯೆಗೆ ಆಯನೆ ಕಾರಣ ಎಂದು ದೂರಿನಲ್ಲಿ ತಿಳಿದಿದ್ದರು. ಈ ಹಿನ್ನೆಲೆಯಲ್ಲಿ ಶೀಜಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS : ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಬೆಂಗಳೂರು & ಮಂಗಳೂರಿನಲ್ಲಿ ಪ್ರತ್ಯೇಕ ಆಸ್ಪತ್ರೆ : ಸಚಿವ ಆರ್. ಆಶೋಕ್