ಚಿತ್ರದುರ್ಗ : 2022-23ನೇ ಸಾಲಿನಲ್ಲಿ “ಮುಖ್ಯಮಂತ್ರಿ ಮೀನುಗಾರರ ವಿದ್ಯಾನಿಧಿ” ಯೋಜನೆಯನ್ನು ಮೀನುಗಾರರ, ಮೀನು ಕೃಷಿಕರ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “ On Entitlement Basis” ಮುಖಾಂತರ ವಿದ್ಯಾರ್ಥಿವೇತನವನ್ನು ಪಾವತಿ ಮಾಡಲಾಗುವುದು. ಪಿಯುಸಿ ಮತ್ತು ತದನಂತರ ಕೋರ್ಸ್ಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು “State Scholarship Portal” ನಲ್ಲಿ ನೊಂದಾಯಿಸಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಜಿಲ್ಲೆಯ ಎಲ್ಲಾ ವೃತ್ತಿಪರ ಮೀನುಗಾರರು, ಮೀನು ಕೃಷಿಕರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕ ಆರ್.ಗಣೇಶ್ ತಿಳಿಸಿದ್ದಾರೆ.
BIGG NEWS : ನನ್ನ ರಕ್ತದಲ್ಲಿ ಗಾಂಜಾ, ಮದ್ಯಪಾನ ಮಾಡಿದ್ದು ಸಿಕ್ಕಿದ್ರೆ ರಾಜಕೀಯ ನಿವೃತ್ತಿ : ಸಿ.ಟಿ ರವಿ ಸವಾಲು