ನವದೆಹಲಿ : ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆಗೆ ಕಾರ್ಯಕರ್ತರು ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಕೋರಿದರು. ಯಾತ್ರೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಭಾಗಿಯಾಗಿದ್ದರು.
ಸೋನಿಯಾ ಗಾಂಧಿಯವರುಮಾಸ್ಕ್ ಧರಿಸಿದ್ದು ಗಮನ ಸೆಳೆಯಿತು. ಪಕ್ಷದ ಕಾರ್ಯಕರ್ತರು, ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಜನರು ಸೇರಿಕೊಂಡಿದ್ದರು.
ಸೋನಿಯಾ ಗಾಂಧಿಯವರು ಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಅಕ್ಟೋಬರ್ನಲ್ಲಿ ಕರ್ನಾಟಕದಲ್ಲಿ ನಡೆದ ಕಾಂಗ್ರೆಸ್ ಮೆಗಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರಿಯಾಂಕಾ ಗಾಂಧಿ ಮಧ್ಯಪ್ರದೇಶದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
#WATCH | Former Congress chief Sonia Gandhi, party General Secretary Priyanka Gandhi Vadra along with husband Robert Vadra join Rahul Gandhi as 'Bharat Jodo Yatra' marches ahead in the national capital Delhi. pic.twitter.com/EfLkTpsNJv
— ANI (@ANI) December 24, 2022
ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ, ರಣದೀಪ್ ಸುರ್ಜೆವಾಲಾ, ಶಕ್ತಿಸಿನ್ಹ್ ಗೋಹಿಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಜೊತೆಗಿದ್ದರು.
ಬಿಗಿ ಭದ್ರತೆ
ಭಾರತ್ ಜೋಡೋ ಯಾತ್ರೆಯು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಬಾದರ್ಪುರದಿಂದ ಆಶ್ರಮದವರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಕಡೆ ಪೊಲೀಸ್ ಹಲವು ತಂಡಗಳನ್ನು ನಿಯೋಜಿಸಲಾಗಿದೆ.
ದೆಹಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್ಎಸ್ಎಸ್ ಮತ್ತು ಬಿಜೆಪಿ ದೇಶದಲ್ಲಿ ಭಯವನ್ನು ಹರಡುತ್ತಿದೆ. ಅವರು ಈ ಭಯವನ್ನು ದ್ವೇಷವಾಗಿ ಪರಿವರ್ತಿಸುತ್ತಾರೆ ಆದರೆ ಕಾಂಗ್ರೆಸ್ ಹಾಗೆ ಮಾಡಲು ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಹಿಂದೂಸ್ತಾನ್ ಮತ್ತು ಪ್ರೀತಿ ಇದೆ. ಯಾವುದೇ ಜಾತಿ, ಧರ್ಮ, ಶ್ರೀಮಂತ ಅಥವಾ ಬಡವರನ್ನು ನೋಡುವುದಿಲ್ಲ. ಎಲ್ಲರೂ ಪರಸ್ಪರ ಅಪ್ಪಿಕೊಳ್ಳುತ್ತದೆ ಎಂದು ಸಭೆಯನ್ನುದ್ದೇಶಿಸಿ ಹೇಳಿದರು.
ವಾಹನ ದಟ್ಟಣೆ
ಯಾತ್ರೆ ಹಿನ್ನೆಲೆಯಲ್ಲಿ ಆಗ್ನೇಯ ದೆಹಲಿಯ ಕೆಲವು ಭಾಗಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಎದುರಾಗಿದೆ. ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು.
ಕೋವಿಡ್19 ಬಗ್ಗೆ ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ – ಸಿಎಂ ಬೊಮ್ಮಾಯಿ
BIGG NEWS: ರಾಜ್ಯದಲ್ಲಿ ಶುರುವಾಯ್ತು ;ಮದ್ಯಪಾನ ಪ್ರಿಯರ ಹೋರಾಟ; ಸರ್ಕಾರಕ್ಕೆ ಅವರ ಬೇಡಿಕೆಗಳು ಏನು ಗೊತ್ತಾ?
WATCH :ಕುಡಿದ ಮತ್ತಿನಲ್ಲಿ ಪೊಲೀಸ್ ರಸ್ತೆಯಲ್ಲೇ ಸಮವಸ್ತ್ರ ಬಿಚ್ಚಿ ‘ಹುಟ್ಟಾಟ ಮೆರೆದ video Viral’