ನವದೆಹಲಿ: ಸಶಸ್ತ್ರ ಪಡೆಗಳ ಪಿಂಚಣಿದಾರರು, ಕುಟುಂಬ ಪಿಂಚಣಿದಾರರರಿಗೆ ಒಂದು ಶ್ರೇಣಿ, ಒಂದು ಪಿಂಚಣಿ ಅಡಿಯಲ್ಲಿ ಪಿಂಚಣಿಯನ್ನು ನೀಡಲಾಗುತ್ತಿದೆ. ಈ ಪಿಂಚಣಿಯನ್ನು ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಂತ ಕೇಂದ್ರ ಸಚಿವ ಸಂಪುಟ ಸಭೆಯ ( Union Cabinet ) ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಕೇಂದ್ರ ಸಚಿವ ಅನುರಾಗ್ ಠಾಕೋರ್ ( Union Minister Anurag Thakur ) ಅವರು, ಸಶಸ್ತ್ರ ಪಡೆಗಳ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಜುಲೈ 1, 2019 ರಿಂದ ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಅಡಿಯಲ್ಲಿ ಪಿಂಚಣಿಯನ್ನು ಪರಿಷ್ಕರಿಸಲು ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ 25.13 ಲಕ್ಷಕ್ಕೂ ಹೆಚ್ಚು ನಿವೃತ್ತ ಯೋಧರು ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ‘ಸ್ಟಾರ್ ಕೆಟಗರಿ ಇಂಡಸ್ಟ್ರಿಯಲ್ ಏರಿಯಾ’ ಸ್ಥಾಪನೆಗೆ ಕರ್ನಾಟಕ ಸರ್ಕಾರ ನಿರ್ಧಾರ
“ಹಿಂದಿನ ಪಿಂಚಣಿದಾರರ ಪಿಂಚಣಿಯನ್ನು 2018 ರ ಕ್ಯಾಲೆಂಡರ್ ವರ್ಷದಲ್ಲಿ ರಕ್ಷಣಾ ಪಡೆಗಳ ನಿವೃತ್ತರ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಸರಾಸರಿ ಆಧಾರದ ಮೇಲೆ ಅದೇ ಶ್ರೇಣಿಯಲ್ಲಿ ಅದೇ ಶ್ರೇಣಿಯಲ್ಲಿ ಅದೇ ಸೇವಾ ಅವಧಿಯೊಂದಿಗೆ ಮರು ನಿಗದಿಪಡಿಸಲಾಗುವುದು” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Union Cabinet has taken a decision on the revision of the pension of Armed Forces Pensioners & family pensioners under the One Rank One Pension with effect from July 01, 2019. More than 25.13 lakh veterans will be benefitted from this decision: Union minister Anurag Thakur pic.twitter.com/ceRCuBtW7K
— ANI (@ANI) December 23, 2022