ಛತ್ತೀಸ್ಗಢ : ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಮತ್ತು ಛತ್ತೀಸ್ಗಢದ ಬಿಜಾಪುರ ಪೊಲೀಸರು ಎರಡು ರಾಜ್ಯಗಳ ಗಡಿಭಾಗದ ಕಾಡಿನಲ್ಲಿ ನಡೆಸಿದ ಇಂದು ಬೆಳಿಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಇನ್ನುಳಿದವರು ಕಾಡಿಗೆ ಓಡಿ ಹೋಗಿದ್ದು, ಹೆಚ್ಚಿನ ಸಾವು ನೋವು ಸಂಭವಿಸಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಗಡ್ಚಿರೋಲಿ ಪೊಲೀಸ್ನ ಸಿ-60 ಘಟಕದ ಅಧಿಕಾರಿಗಳು ಮತ್ತು ಬಿಜಾಪುರ ಪೊಲೀಸ್ನ ಡಿಆರ್ಜಿ ದಮ್ರಾಂಚ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿತ್ತು.
ಎನ್ಕೌಂಟರ್ ನಡೆದ ಸ್ಥಳದಲ್ಲಿ ಇಬ್ಬರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಗಡ್ಚಿರೋಲಿಯ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.
ದಮ್ರಾಂಚ ಅರಣ್ಯದಲ್ಲಿ ಗಡ್ಚಿರೋಲಿ ಪೊಲೀಸರು ಮತ್ತು ಬಿಜಾಪುರ ಪೊಲೀಸರ ತಂಡಗಳ ಗಸ್ತು ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
BREAKING NEWS: ಮಂಗಳವಾರ ರಾಜ್ಯದ ಆಸ್ಪತ್ರೆಗಳಲ್ಲಿ ಕೊರೊನಾ ಮಾಕ್ ಡ್ರಿಲ್: ಸಚಿವ ಡಾ. ಕೆ. ಸುಧಾಕರ್