ಲಕ್ನೋ: ಎರಡು ವರ್ಷಗಳ ಹಿಂದೆ ದಲಿತ ಮಹಿಳೆಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವರದಿ ಮಾಡಲು ಯುಪಿಯ ಹತ್ರಾಸ್ಗೆ ತೆರಳುತ್ತಿದ್ದಾಗ ಭಯೋತ್ಪಾದನೆ ಆರೋಪದ ಮೇಲೆ ಬಂಧಿತನಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಇಂದು ಜಾಮೀನು ನೀಡಿದೆ.
ಸಿದ್ದಿಕ್, ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನಿಂದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಆದರೆ ಇದುವರೆಗೆ ಯಾವುದೇ ಪರಿಹಾರ ಸಿಗದ ಕಾರಣ ಲಕ್ನೋ ಜೈಲಿನಲ್ಲಿನಲ್ಲಿದ್ದರು.
ಈ ತಿಂಗಳ ಆರಂಭದಲ್ಲಿ, ಲಕ್ನೋದ ನ್ಯಾಯಾಲಯವು ಆತನ ಮತ್ತು ಇತರ ಆರು ಜನರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಿತ್ತು. ಕೆಎ ರವೂಫ್ ಶೆರೀಫ್, ಅತಿಕುರ್ ರೆಹಮಾನ್, ಮಸೂದ್ ಅಹ್ಮದ್, ಮೊಹಮ್ಮದ್ ಆಲಂ, ಅಬ್ದುಲ್ ರಜಾಕ್ ಮತ್ತು ಅಶ್ರಫ್ ಖಾದಿರ್ ಇತರ ಆರೋಪಿಗಳಾಗಿದ್ದಾರೆ.
ಈ ವ್ಯಕ್ತಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ನ ಸದಸ್ಯರಾಗಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿವೆಂದು ಹೇಳಿದ್ದಾರೆ.
ಕಪ್ಪನ್ ಮತ್ತು ಮೂವರು ಸಹ-ಆರೋಪಿಗಳಾದ ಅತಿಕುರ್ ರೆಹಮಾನ್, ಮೊಹಮ್ಮದ್ ಆಲಂ ಮತ್ತು ಮಸೂದ್ ಅಹ್ಮದ್ ಅವರನ್ನು ಮಥುರಾದಲ್ಲಿ ಯುಪಿ ಪೊಲೀಸರು ಬಂಧಿಸಿದ್ದರು.
ರಾಜ್ಯದ ‘ಪಿಂಚಣಿದಾರ’ರಿಗೆ ಗುಡ್ ನ್ಯೂಸ್:ಮನೆ ಬಾಲಿಗೆ ಬರಲಿದೆ ‘ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ’