ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ( BJP Government ) 15 ಲಕ್ಷ ಗೋವುಗಳು ಎರಡೇ ವರ್ಷದಲ್ಲಿ ಮಾಯವಾಗಿದ್ದು ಹೇಗೆ? ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ? ಇದೇನಾ ಬಿಜೆಪಿ ಗೋರಕ್ಷಣೆ? ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಸಮರ್ಪಕ ಲಸಿಕೆ ನೀಡದೆ ಸರ್ಕಾರವೇ ಪರೋಕ್ಷ ಗೋಹತ್ಯೆ ಮಾಡಿತೆ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಸರ್ಕಾರವೇ ನೀಡಿದ ಅಂಕಿ ಅಂಶದ ಪ್ರಕಾರ ಗೋರಕ್ಷಕರು ಎಂದುಕೊಳ್ಳುವ ಬಿಜೆಪಿ ಆಡಳಿತದಲ್ಲಿ 15 ಲಕ್ಷ ಗೋವುಗಳು ಎರಡೇ ವರ್ಷದಲ್ಲಿ ಮಾಯವಾಗಿದ್ದು ಹೇಗೆ?
ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ?
ಇದೇನಾ ಬಿಜೆಪಿ ಗೋರಕ್ಷಣೆ?ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಸಮರ್ಪಕ ಲಸಿಕೆ ನೀಡದೆ ಸರ್ಕಾರವೇ ಪರೋಕ್ಷ ಗೋಹತ್ಯೆ ಮಾಡಿತೆ? pic.twitter.com/g4yIWeEreR
— Karnataka Congress (@INCKarnataka) December 23, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಯಾವುದೇ ಜನಪರ ಯೋಜನೆ ರೂಪಿಸದ ಬಿಜೆಪಿ ಸರ್ಕಾರ ( BJP Government ) ಜಾರಿ ಇದ್ದ ಜನೋಪಯೋಗಿ ಯೋಜನೆಗಳನ್ನೂ ಹಳ್ಳ ಹಿಡಿಸಿದೆ. ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಹೊಂದಿಕೊಳ್ಳುವಂತೆ ರಾಜ್ಯದ ಯುವಜನತೆಯನ್ನು ತಯಾರುಗೊಳಿಸಬೇಕಾದ ಸರ್ಕಾರ ಲ್ಯಾಪ್ ಟಾಪ್ ( Laptop ) ನೀಡಲು ಸಹ ಮೀನಾಮೇಶ ಎಣಿಸುತ್ತಿದೆ ತ್ರಿಶೂಲ ಕೊಡುವವರಿಗೆ ಲ್ಯಾಪ್ಟಾಪ್ ಮಹತ್ವ ತಿಳಿಯುವುದಾದರೂ ಹೇಗೆ ಎಂದು ಕೇಳಿದೆ.
ಯಾವುದೇ ಜನಪರ ಯೋಜನೆ ರೂಪಿಸದ @BJP4Karnataka ಸರ್ಕಾರ ಜಾರಿ ಇದ್ದ ಜನೋಪಯೋಗಿ ಯೋಜನೆಗಳನ್ನೂ ಹಳ್ಳ ಹಿಡಿಸಿದೆ.
ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಹೊಂದಿಕೊಳ್ಳುವಂತೆ ರಾಜ್ಯದ ಯುವಜನತೆಯನ್ನು ತಯಾರುಗೊಳಿಸಬೇಕಾದ ಸರ್ಕಾರ ಲ್ಯಾಪ್ಟಾಪ್ ನೀಡಲು ಸಹ ಮೀನಾಮೇಶ ಎಣಿಸುತ್ತಿದೆ
ತ್ರಿಶೂಲ ಕೊಡುವವರಿಗೆ ಲ್ಯಾಪ್ಟಾಪ್ ಮಹತ್ವ ತಿಳಿಯುವುದಾದರೂ ಹೇಗೆ! pic.twitter.com/Xu2ljZcAyA
— Karnataka Congress (@INCKarnataka) December 23, 2022
ತಮ್ಮ ತವರು ಜಿಲ್ಲೆಯಲ್ಲೇ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗದ್ದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ಅಸಾಮರ್ಥ್ಯಕ್ಕೆ ನಿದರ್ಶನ. ಸೂಕ್ತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಸಚಿವರು ಕನಿಷ್ಠ ಪಕ್ಷ ತಮ್ಮ ಜಿಲ್ಲೆಯಲ್ಲಾದರೂ ತಮ್ಮ ಸಾಮರ್ಥ್ಯ ತೋರಿಸಲಿ ಎಂದು ಹೇಳಿದೆ.
ತಮ್ಮ ತವರು ಜಿಲ್ಲೆಯಲ್ಲೇ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಸೂಕ್ತ
ಸಾರಿಗೆ ವ್ಯವಸ್ಥೆ ಕಲ್ಪಿಸಲಾಗದ್ದು ಸಾರಿಗೆ ಸಚಿವ @sriramulubjp ಅವರ ಅಸಾಮರ್ಥ್ಯಕ್ಕೆ ನಿದರ್ಶನ.ಸೂಕ್ತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ಸಚಿವರು ಕನಿಷ್ಠ ಪಕ್ಷ ತಮ್ಮ ಜಿಲ್ಲೆಯಲ್ಲಾದರೂ ತಮ್ಮ ಸಾಮರ್ಥ್ಯ ತೋರಿಸಲಿ! pic.twitter.com/CGOiKV27R3
— Karnataka Congress (@INCKarnataka) December 23, 2022
ಬಿಜೆಪಿ ಸಚಿವರಿಗೆ ಜನರ ವಿಚಾರಗಳನ್ನು ಚರ್ಚಿಸುವ ಆಸಕ್ತಿ ಇಲ್ಲ, ಆಡಳಿತದಲ್ಲಿ ಗಂಭೀರ್ಯತೆ ಇಲ್ಲ. ಅವರ ಆಸಕ್ತಿ ಏನಿದ್ದರೂ 40% ಕಮಿಷನ್ ಲೂಟಿಗೆ ಮಾತ್ರ. ಸಚಿವರ ಹಾಜರಿ ಇಲ್ಲದೆ ಸದನ ಮುಂದೂಡುವ ಸ್ಥಿತಿ ಒದಗಿದ್ದು ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ತಮ್ಮ ವೈಫಲ್ಯಗಳಿಂದಾಗಿ ಪಲಾಯನದ ದಾರಿ ಹಿಡಿದಿದೆ ಬಿಜೆಪಿ ಎಂದು ವಾಗ್ಧಾಳಿ ನಡೆಸಿದೆ.
'@BJP4Karnataka ಸಚಿವರಿಗೆ ಜನರ ವಿಚಾರಗಳನ್ನು ಚರ್ಚಿಸುವ ಆಸಕ್ತಿ ಇಲ್ಲ, ಆಡಳಿತದಲ್ಲಿ ಗಂಭೀರ್ಯತೆ ಇಲ್ಲ. ಅವರ ಆಸಕ್ತಿ ಏನಿದ್ದರೂ 40% ಕಮಿಷನ್ ಲೂಟಿಗೆ ಮಾತ್ರ.
ಸಚಿವರ ಹಾಜರಿ ಇಲ್ಲದೆ ಸದನ ಮುಂದೂಡುವ ಸ್ಥಿತಿ ಒದಗಿದ್ದು ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ.
ತಮ್ಮ ವೈಫಲ್ಯಗಳಿಂದಾಗಿ ಪಲಾಯನದ ದಾರಿ ಹಿಡಿದಿದೆ ಬಿಜೆಪಿ. pic.twitter.com/q2v7dM2orP
— Karnataka Congress (@INCKarnataka) December 23, 2022