ಸೊಲ್ಲಾಪುರ: ನನ್ನ ವಧು ಎಲ್ಲಿ? ಮದುವೆಯಾಗೋದಕ್ಕೆ ವಧುಗಳನ್ನು ಹುಡುಕುವುದಕ್ಕಾಗಿ ಸುಮಾರು 50 ಜನರು ಗುರುವಾರ ಸೊಲ್ಲಾಪುರದ ಜಿಲ್ಲಾಧಿಕಾರಿ ಕಚೇರಿಗೆ ಮದುಮಗನಂತೆ ವೇಷಭೂಷಣಗಳನ್ನು ಧರಿಸಿ ಜಾಥ ನಡೆಸಿದ್ದಾರೆ.ಈ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ ರಾಜ್ಯದಲ್ಲಿನ ಲಿಂಗ ಅಸಮತೋಲನವನ್ನು ಎತ್ತಿ ಹಿಡಿಯಲು ಮೆರವಣಿಗೆ ನಡೆಸಲಾಯಿತು.
#WATCH | Maharashtra: About 50 bachelors, wearing 'sehras' (wedding crowns), took out a procession with drums and horses to the Collector's office in Solapur, demanding implementation of the Pre-Conception and Pre-Natal Diagnostic Techniques (PCPNDT) Act (22.12) pic.twitter.com/Q4rHNZdr9A
— ANI (@ANI) December 23, 2022
ರಾಜ್ಯದಲ್ಲಿ ಪುರುಷ-ಮಹಿಳೆಯರ ಅನುಪಾತವನ್ನು ಸುಧಾರಿಸಲು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (ಪಿಸಿಪಿಎನ್ಡಿಟಿ) ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು
ಪಿಸಿಪಿಎನ್ಡಿಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯ ಸಂಘಟನೆ ಬುಧವಾರ ಆಯೋಜಿಸಿದ್ದ ‘ವರ ಮೋರ್ಚಾ’ದ ಅಂಗವಾಗಿ ಮೆರವಣಿಗೆ ನಡೆಸಲಾಯಿತು., ಮಹಾರಾಷ್ಟ್ರದ ಲಿಂಗ ಅನುಪಾತವು 1,000 ಪುರುಷರಿಗೆ 920 ಮಹಿಳೆಯರು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21) ಯಲ್ಲಿ ಬಹಿರಂಗವಾಗಿದೆ