ಬೆಂಗಳೂರು: ಸ್ನೇಹಿತರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ.
BIGG NEWS: ಗುತ್ತಿಗೆದಾರರ ಕೆಂಪಣ್ಣ ವಿರುದ್ಧ ಮಾನನಷ್ಟ ಪ್ರಕರಣ; ಜಾಮೀನು ರಹಿತ ವಾರೆಂಟ್
ಉದ್ಯಮಿ ನಜೀರ್ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಲಪಾಡ್ ಸ್ನೇಹಿತ ನಜೀರ್ ಅವರಿಂದ ಫಾರ್ಚೂನರ್ ಕಾರು ಪಡೆದಿದ್ದರು. ಸ್ನೇಹಿತ ಎಂಬ ಕಾರಣಕ್ಕೆ ನಜೀರ್ ಕಾರು ನೀಡಿದ್ದರು.
BIGG NEWS: ಗುತ್ತಿಗೆದಾರರ ಕೆಂಪಣ್ಣ ವಿರುದ್ಧ ಮಾನನಷ್ಟ ಪ್ರಕರಣ; ಜಾಮೀನು ರಹಿತ ವಾರೆಂಟ್
ಚುನಾವಣೆ ನಡೆದ ಬಳಿಕ ತನ್ನ ಕಾರನ್ನು ಮರಳಿ ಹಿಂದಿರುಗಿಸುವಂತೆ ನಜೀರ್ ಕೇಳಿದ್ದಾರೆ. ಆದರೆ ನಲಪಾಡ್ ಕಾರು ನೀಡುವ ಮನಸ್ಸನ್ನು ಮಾಡಿಲ್ಲ. ಕಾರು ನೀಡದ ನಲಪಾಡ್ ಈಗ ಧಮ್ಕಿ ಹಾಕಿದ್ದಾರೆ.ನಿನ್ನನ್ನು ನೋಡಿಕೊಳ್ಳುತ್ತಾರೆ. ಮತ್ತೆ ಕಾರು ಕೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.