ಮೈಸೂರು: ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಏರಿಕೆ ಹಿನ್ನೆಲೆ ಕರ್ನಾಟಕಕ್ಕೆ ಕೊರೊನಾ ಭೀತಿ ಶುರುವಾಗಿದೆ.
ಮೈಸೂರಿನಲ್ಲೂ ಮತ್ತೆ ಕೋವಿಡ್ ಸೋಂಕು ಹೆಚ್ಚಳ ಭೀತಿ ಶುರುವಾಗಿದೆ. ಆರೋಗ್ಯಾಧಿಕಾರಿಗಳ ಜತೆ ಡಿಸಿ ಕೆ.ವಿ ರಾಜೇಂದ್ರ ಸಬೆ ನಡೆಸಲಿದ್ದಾರೆ. ಮೈಸೂರಿಗೆ ಪ್ರತ್ಯೇಕ ಮಾರ್ಗಸೂಚಿ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ಮೈಸೂರಿನಲ್ಲಿ ಮೊದಲ , ೨ನೇ ಡೋಸ್ ಶೇ.೧೦೦ ರಷ್ಟು ಆಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಹೊರಾಂಗಣಕ್ಕೆ ಈ ಆದೇಶ ಅನ್ವಯವಾಗುವುದಿಲ್ಲ. ಸರ್ಕಾರ ನೀಡಿರುವ ಆದೇಶ ಪಾಲಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.