ಬೆಂಗಳೂರು : ಚೀನಾದಲ್ಲಿ ಕೊರೊನಾ ಹೆಚ್ಚಾದ ಬೆನ್ನಲೆ ಸಿಲಿಕಾನ್ ಸಿಟಿಯಲ್ಲೂ ಕೊರೊನಾ ನಿಯಮಗಳನ್ನು ಅನುಸರಿಸೋದಕ್ಕೆ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದ ಮಾಸ್ಕ್ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.
BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ | Mask mandatory
ಇನ್ಮುಂದೆ ಮೆಟ್ರೋದಲ್ಲಿ ಮಾಸ್ಕ್ ಧರಿಸದೇ ಪ್ರಯಾಣ ಮಾಡುವಂತಿಲ್ಲ. ಯಾವುದೇ ಪ್ರದೇಶಕ್ಕೆ ಓಡಾಡಬೇಕಿದ್ರೆ ಮಾಸ್ಕ್ ಧರಿಸಿಕೊಂಡೇ ಹೋಗಬೇಕು ಇದೀಗ ಮೆಟ್ರೋ ನಿಲ್ದಾಣದ ಎದುರೇ ಮಾಸ್ಕ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾಸ್ಕ್ ಧರಿಸದೇ ಮೆಟ್ರೋಗೆ ಬರುವವರನ್ನು ಮೆಟ್ರೋ ಸಿಬ್ಬಂದಿಗಳು ತಡೆದು ನಿಲ್ಲಿಸಲಾಗುತ್ತಿದೆ. ಮಾಸ್ಕ್ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಹಾಗಾಗಿ ಇಂದಿನಿಂದ ಮೆಟ್ರೋದಲ್ಲಿ ಸಂಚಾರ ಮಾಡೋದಕ್ಕೆ ಮುಂದಾಗುವ ಮುನ್ನ ನೀವು ಮಾಸ್ಕ್ ಧರಿಸುವುದು ಉತ್ತಮ
BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ | Mask mandatory
ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಪಂಚದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಮಾಸ್ಕ್ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅನುಮತಿ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿವರು ಡಿ 22ರಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ಕೇಂದ್ರ ಸರ್ಕಾರ ವಿದೇಶದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ | Mask mandatory
ವಿದೇಶದಿಂದ ಬರುವವರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು. ಏರ್ಪೋರ್ಟ್ಗಳಲ್ಲಿ ಮಾಸ್ಕ್ ಹಾಗೂ ದೈಹಿಕ ಅಂತರ ಪಾಲಿಸಬೇಕು. ಏರ್ಪೋರ್ಟ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಕೊವಿಡ್ ಗುಣಲಕ್ಷಣ ಕಂಡುಬಂದ್ರೆ ಐಸೋಲೇಷನ್ ಕಡ್ಡಾಯ. ಇನ್ಮುಂದೆ ಏರ್ಪೋರ್ಟ್ಗಳಲ್ಲಿ ಱಂಡಮ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ಅಗತ್ಯವಿಲ್ಲ. 12 ವರ್ಷದೊಳಗಿನವರಿಗೆ ಸೋಂಕಾದ್ರೆ ಮನೆಯಲ್ಲೇ ಐಸೋಲೇಷನ್.