ಬೆಂಗಳೂರು: ರಾಜ್ಯ ಸರ್ಕಾರದಿಂದ 2021-22ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ( guest lecturers ) ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇದಲ್ಲದೇ ಪರೀಕ್ಷಆ ಕೆಲಸಕ್ಕೆ ಹಾಜರಾಗಲು ಒಂದು ಸೆಮಿಸ್ಟರ್ ನಲ್ಲಿ 5 ದಿನಗಳಂತೆ ಅವಕಾಶವನ್ನು ನೀಡಲಾಗಿದೆ. ಈ ಮೂಲಕ ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ (Department of Collegiate Education ) ಮುಖ್ಯ ಆಡಳಿತಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅಂದರಲ್ಲಿ 2021-22ನೇ ಸಾಲಿನಲ್ಲಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಅವಧಿಯನ್ನು ಶೈಕ್ಷಣಿಕ ಹಿತದೃಷ್ಠಿಯಿಂದ ಡಿಸೆಂಬರ್ 2022ರ ಅಂತ್ಯದವರೆಗೆ ವಿಸ್ತರಿಸಲು ಸರ್ಕಾರ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
‘ವರಿಷ್ಠರು ಒಪ್ಪಿದರೆ ಮಂತ್ರಿಗಿರಿ, ಒಪ್ಪದಿದ್ದರೆ ದಾದಾಗಿರಿ’ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಇನ್ನೂ ಅತಿಥಿ ಉಪನ್ಯಾಸಕರುಗಳಿಗೆ ಪರೀಕ್ಷಾ ಕೆಲಸಕ್ಕೆ ಹಾಜರಾಗಲು ಒಂದು ಸೆಮಿಸ್ಟರ್ ನಲ್ಲಿ 5 ದಿನಗಳಂತೆ ಅವಕಾಶ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.