ಬೆಳಗಾವಿ : ಯಾವುದೇ ದೇಶದಲ್ಲಿ ಕೊರೊನಾ ಹೆಚ್ಚಳವಾದ್ರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ಪ್ರಮಾಣ ಹೆಚ್ಚಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
BIGG NEWS : ಶಾಸಕ ಸಿ.ಟಿ. ರವಿ ಸದನಕ್ಕೆ ಹೆಂಡ ಕುಡಿದು ಬರ್ತಾರೆ : ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
ಸುವರ್ಣಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೊನಾ ಪ್ರಮಾಣ ಹೆಚ್ಚಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಜನರಲ್ಲಿ ಇನ್ನೂ ಆಸಕ್ತಿ ಬಂದಿಲ್ಲ. ಕೊರೊನಾ ಹರಡದಂತೆ ತಡೆಗಟ್ಟಲು ಸಭೆ ಕರೆಯಲಾಗಿದೆ.ಆರೋಗ್ಯ ಇಲಾಖೆಯ ಅಧಿಕಾರಿಗಳು, ತಜ್ಞರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಸಹಕರಿಸಿದ್ರೆ ಸಾವು-ನೋವು ತಡೆಗಟ್ಟಬಹುದು ಎಂದರು.