ಬೆಳಗಾವಿ : ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ, ಇದನ್ನು ಕಾಂಗ್ರೆಸ್ ಸಾಭೀತು ಮಾಡಿದ್ರೆ , ಅಷ್ಟೂ ಆಸ್ತಿಯನ್ನ ದಾನ ಮಾಡ್ತೀನಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿ ಟಿ ರವಿ ನಾನು ನನ್ನ ಆಸ್ತಿ ವಿವರವನ್ನ ಲೋಕಾಯುಕ್ತಕ್ಕೆ ನೀಡುತ್ತೇನೆ, ನಾನು ಘೋಷಣೆ ಮಾಡಿದಕ್ಕಿಂತ ಬೇರೆ ಆಸ್ತಿ ಇದೆ ಎಂದಾದ್ರೆ, ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ, ಇದನ್ನು ಕಾಂಗ್ರೆಸ್ ಸಾಭೀತು ಮಾಡಿದ್ರೆ , ಅಷ್ಟೂ ಆಸ್ತಿಯನ್ನ ದಾನ ಮಾಡ್ತೀನಿ ಎಂದು ಸಿಟಿ ರವಿ ಸವಾಲ್ ಹಾಕಿದ್ದಾರೆ.
ಒಂದು ಪಕ್ಷದ ಅಧ್ಯಕ್ಷರಾಗಿ ಭಯೋತ್ಪಾದಕರ ಪರವಾಗಿ ಮಾತನಾಡೋದು ಸರಿಯಲ್ಲ. ಇದು ಅವರ ಸ್ಥಾನಕ್ಕೆ ಶೋಭೆ ತರಲ್ಲ , ಪ್ರಾಮಾಣಿಕವಾಗಿದ್ದರೆ ಡಿಕೆಶಿ ಹೆದರುವ ಅವಶ್ಯಕತೆ ಇಲ್ಲ ಎಂದು ಸಿ ಟಿ ರವಿ ತಿರುಗೇಟು ನೀಡಿದ್ದಾರೆ.