ಬೆಳಗಾವಿ : ಮೈಸೂರು ಚೆನ್ನೈ ವಂದೇ ಭಾರತ್ ರೈಲಿನ ಸಮಯ ಬದಲಾಯಿಸುವಂತೆ ಮರಿತಿಬ್ಬೇಗೌಡ ಸದನದಲ್ಲಿ ಪ್ರಸ್ತಾಪಿಸಿದರು.
ಜನಶತಾಬ್ದಿ ಹಾಗೂ ವಂದೇ ಭಾರತ್ ಟ್ರೇನ್ ಸಮಯ ಕೇವಲ ಅರ್ಧ ಗಂಟೆ ವ್ಯತ್ಯಾಸ ಇದೆ. ಇದನ್ನು ಬದಲಾಯಿಸುವಂತೆ ಅವರು ಮನವಿ ಮಾಡಿದರು. ಮಂಡ್ಯದಲ್ಲಿಯೂ ಜನಶತಾಬ್ದಿ ಹಾಗೂ ವಂದೇ ಭಾರತ್ಗೆ ನಿಲುಗಡೆ ನೀಡುವಂತೆ ಒತ್ತಾಯಿಸಲಾಯಿತು. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಆಗ್ರಹಿಸಿದರು. ಕುಲಪತಿ ನೇಮಕಕ್ಕೆ 5-6 ಕೋಟಿ ಕೊಡಬೇಕು ಎಂದು ಬಿಜೆಪಿಯ ಜನಪ್ರತಿನಿಧಿಯೇ ಗಂಭೀರ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಹರಿಪಸ್ರಾದ್ ಹೇಳಿದರು. ಇದಕ್ಕೆ ನೋಟಿಸ್ ಕೊಡಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಪತಿ ತಿಳಿಸಿದರು.
BIG NEWS: ಬೆಂಗಳೂರಿನಿಂದ ಬೆಳಗಾವಿಗೆ ಹೊರಟ ಬಿಜೆಪಿ ರೆಬಲ್ ಶಾಸಕರು: ಇಂದು ಸಂಜೆ ಸಿಎಂ ಬೊಮ್ಮಾಯಿ ಭೇಟಿ
ಮಂಗಳೂರು ಸ್ಪೋಟ : ಆಟೋ ಚಾಲಕನಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ