ಬೆಂಗಳೂರು: ಶಿಕ್ಷಕರಿಗಂ 17 ಸೇವಾ ಸೌಲಭ್ಯಗಳನ್ನು ಮಂಜೂರು ಮಾಡುವಾಗ ಕಡ್ಡಾಯವಾಗಿ ಆನ್ ಲೈನ್ ಮುಖಾಂತರವೇ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಅದರ ಹೊರತಾಗಿ ಬೇರೆ ಯಾವುದೇ ಮಾರ್ಗದಲ್ಲಿಯೂ ಸಲ್ಲಿಸದಂತೆ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು, ಶಿಕ್ಷಕರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ ನಿಯಮಾನುಸಾರ ನೀಡುವ 17 ಸೇವೆಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಸ್ವೀಕರಿಸಿ, ಆನ್ ಲೈನ್ ಮೂಲಕವೇ ಇತ್ಯರ್ಥಪಡಿಸುವಂತೆ ತಿಳಿಸಿದ್ದಾರೆ.
ಮುರುಗೇಶ್ ನಿರಾಣಿ ಪೇಮೆಂಟ್ ನೀಡಿ ಸಚಿವರದವರು ಯತ್ನಾಳ್ ಹೇಳಿಕೆ ವಿಚಾರ: ಈ ಹಣ ಪಡೆದವರು ಯಾರೆಂದು ಕಾಂಗ್ರೆಸ್ ಪ್ರಶ್ನೆ
ಇನ್ನೂ ಯಾವುದೇ ಕಾರಣಕ್ಕೂ ಭೌತಿಕ ಪ್ರಸ್ತಾವನೆಗಳನ್ನು ಸ್ವೀಕರಿಸಬಾರದು. ಈ ಬಗ್ಗೆ ಈಗಾಗಲೇ ಎಲ್ಲಾ ಬಟವಾಡೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಿದ್ದೂ ಕೆಲವು ಜಿಲ್ಲೆಗಳಲ್ಲಿ ಸಲ್ಲಿಕೆಯಾದ ಆಪ್ ಲೈನ್ ಮೂಲಕವೇ ಭೌತಿಕ ಪ್ರಸ್ತಾನೆಗಳನ್ನು ಸ್ವೀಕರಿಸುತ್ತಿರುವ ಸಂದೇಹ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಇಲಾಖೆಯ ಎಲ್ಲಾ ಬಟವಾಡೆ ಅಧಿಕಾರಿಗಳು ಶಿಕ್ಷಕರಿಗೆ ಸೇವಾ ಸೌಲಭ್ಗಳನ್ನು ಮಂಜೂರು ಮಾಡಲು ಆನ್ ಲೈನ್ ಮೂಲಕ ಪ್ರಸ್ತಾವನೆಗಳನ್ನು ಪಡೆದು, ಇತ್ಯರ್ಥ ಪಡಿಸಿ, ಮಂಜೂರಾತಿ ಆದೇಶ ನೀಡುವಾಗ ತಂತ್ರಾಂಶದಲ್ಲಿ ಪ್ರಸ್ತಾವನೆಯ ಕ್ರಮ ಸಂಖ್ಯೆಯನ್ನು ಮಂಜೂರಾತಿ ಆದೇಶ ಪತ್ರದಲ್ಲಿ ಕಡ್ಡಾಯವಾಗಿ ನಮೂದಿಸಿ, ಆದೇಶ ಪತ್ರವನ್ನು ನೀಡಲು ತಿಳಿಸಿದ್ದಾರೆ.