ನವದೆಹಲಿ : ಕೋವಿಡ್ -19 ರ ನಿರ್ಬಂಧಗಳನ್ನು ಸಡಿಲಿಸಿದ ನಂತ್ರ ಮತ್ತೊಮ್ಮೆ ಕೊರೊನಾವೈರಸ್ ಚೀನಾದಲ್ಲಿ ವಿನಾಶವನ್ನ ಉಂಟು ಮಾಡುತ್ತಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಅವ್ರು ಚೀನಾದ ಆಸ್ಪತ್ರೆಗಳು ಸಂಪೂರ್ಣವಾಗಿ ಮುಳುಗಿವೆ ಎಂದು ಹೇಳಿದರು. ಮುಂದಿನ 90 ದಿನಗಳಲ್ಲಿ ಚೀನಾದ ಜನಸಂಖ್ಯೆಯ 60 ಪ್ರತಿಶತಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ಈ ಹೊಸ ರೂಪಾಂತರದ ಕೊರೊನಾದಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಲಕ್ಷಗಟ್ಟಲೆ ಜನರು ಸಾವನ್ನಪ್ಪುವ ಸಾಧ್ಯತೆಯೂ ಇದೆ. ಈ ಹೊಸ ರೂಪಾಂತರದಿಂದ ಭಾರತ ಎಷ್ಟು ಅಪಾಯ ಎದುರಿಸುತ್ತಿದೆ.?
ಕೊರೊನಾದ ಈ ಹೊಸ ರೂಪಾಂತರದ ಲಕ್ಷಣಗಳೇನು.?
ಒಮಿಕ್ರಾನ್ನ ಉಪ-ವ್ಯತ್ಯಯಗಳಾದ BA.5.2 ಮತ್ತು BF.7 ವೇಗವಾಗಿ ಹರಡುತ್ತಿದ್ದು, ಆದ್ರೆ, ಅದೇನು ಅಪಾಯಕಾರಿ ಅಲ್ಲ. ಹೊಸ ರೂಪಾಂತರದಿಂದ ಜನರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಪ್ರಕಾರ, ಈ ರೂಪಾಂತರಗಳಿಂದ ಸೋಂಕಿತ ರೋಗಿಗಳು ತೀವ್ರವಾದ ಗಂಟಲು ಸೋಂಕು, ದೇಹ ನೋವು, ಸೌಮ್ಯ ಅಥವಾ ಅತಿ ಹೆಚ್ಚು ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತಿದ್ದಾರೆ.
ಹೊಸ ರೂಪಾಂತರದಿಂದ ಭಾರತ ಎಷ್ಟು ಅಪಾಯ ಎದುರಿಸುತ್ತಿದೆ ಗೊತ್ತಾ?
ಹೊಸ ರೂಪಾಂತರವು ಅಪಾಯಕಾರಿ ಅಲ್ಲ. ಆದ್ರೆ, ಇದು ವೇಗವಾಗಿ ಹರಡುತ್ತಿದೆ . ಮುಂದಿನ ಕೆಲವೇ ದಿನಗಳಲ್ಲಿ ಇದು ಇಡೀ ವಿಶ್ವದ 10 ಪ್ರತಿಶತದಷ್ಟು ಜನರನ್ನ ಸೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.
2020 ರಲ್ಲಿ ನಡೆದ ಸನ್ನಿವೇಶ ಮತ್ತೆ ಮರುಕಳಿಸಿದೆ : ತಜ್ಞರು
ಚೀನಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ರೋಗಿಗಳನ್ನು ಆಸ್ಪತ್ರೆಯಲ್ಲಿ ಕೆಳಗಡೆ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಎರಿಕ್ ಫೀಗೆಲ್-ಡಿಂಗ್, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು U.S. ಯುಎಸ್ ಮೂಲದ ಆರೋಗ್ಯ ಅರ್ಥಶಾಸ್ತ್ರಜ್ಞರ ಪ್ರಕಾರ, 2020 ವರ್ಷವು ಮತ್ತೆ ಮರಳಿದೆ ಎಂದು ತೋರುತ್ತಿದೆ. ವರದಿಗಳನ್ನು ನಂಬುವುದಾದರೆ, ಪ್ರತಿದಿನ ದುಪ್ಪಟ್ಟು ಪ್ರಕರಣಗಳು ಬರುತ್ತಿವೆ. ಚೀನಾದ ಸುಮಾರು 60 ಪ್ರತಿಶತದಷ್ಟು ಜನರು ಕರೋನದ ಈ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಬಹುದು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಇದಕ್ಕೆ ಬಹುದೊಡ್ಡ ಕಾರಣವೆಂದರೆ ಲಸಿಕೆ ಹಾಕದಿರುವುದು ಹಾಗೂ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ದುಸ್ಥಿತಿ.
Watch : ರಾಜಸ್ಥಾನದ ಕೋಟಾದಲ್ಲಿ ಗೂಳಿಯೊಂದು ವಯೋವೃದ್ಧನಿಗೆ ದಾಳಿಗೈದ ಆಘಾತಕಾರಿ video viral