ನವದೆಹಲಿ: ಉದ್ಯೋಗ ನೀಡುವ ನೆಪದಲ್ಲಿ ವಂಚನೆ ಮಾಡಿ ತಮಿಳುನಾಡಿನ ಕನಿಷ್ಠ 28 ಜನರನ್ನು ನವದೆಹಲಿ ರೈಲ್ವೆ ನಿಲ್ದಾಣದ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರತಿ ದಿನ ಎಂಟು ಗಂಟೆಗಳ ಕಾಲ ಒಂದು ತಿಂಗಳು ಅಲ್ಲಿ ಬರುವ ಹೋಗುವ ರೈಲುಗಳನ್ನು ಏಣಿಸುವ ಕೆಲಸಕ್ಕೆ ನಿಯೋಜನೆ ಮಾಡಲಾಗಿರುವ ಘಟನೆ ನಡೆದಿದೆ.
ಟ್ರಾವೆಲ್ ಟಿಕೆಟ್ ಪರೀಕ್ಷಕ (ಟಿಟಿಇ), ಸಂಚಾರ ಸಹಾಯಕರು ಮತ್ತು ಗುಮಾಸ್ತರ ಹುದ್ದೆಗಳಿಗೆ ಇದು ಅವರ ತರಬೇತಿಯ ಒಂದು ಭಾಗವಾಗಿದೆ ಅಂತ ಹೇಳಿ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಪ್ರತಿಯೊಬ್ಬರೂ 2 ಲಕ್ಷದಿಂದ 24 ಲಕ್ಷ ರೂ.ಗಳವರೆಗೆ ಹಣವನ್ನು ಪಡೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ವಂಚಕರ ಗುಂಪೊಂದು ಉದ್ಯೋಗ ನೀಡುವ ನೆಪದಲ್ಲಿ 2.67 ಕೋಟಿ ರೂ.ಗಳನ್ನು ವಂಚಿಸಿದೆ ಎಂದು 78 ವರ್ಷದ ಎಂ.ಸುಬ್ಬುಸಾಮಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
“ಪ್ರತಿಯೊಬ್ಬ ಅಭ್ಯರ್ಥಿಯು ಸುಬ್ಬುಸ್ವಾಮಿಗೆ 2 ಲಕ್ಷ ರೂ.ಗಳಿಂದ 24 ಲಕ್ಷ ರೂ.ಗಳವರೆಗೆ ಹಣವನ್ನು ಪಾವತಿಸಿದ್ದಾರೆ ಎನ್ನಲಾಗಿದೆ. ರಾಣಾ ದೆಹಲಿಯ ಉತ್ತರ ರೈಲ್ವೆ ಕಚೇರಿಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳರಿವು ವ್ಯಕ್ತಿ ಎಂದು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದ.ಎ ಈ ಬಗ್ಗೆ ಮಧುರೈನ ಸಂತ್ರಸ್ತ 25 ವರ್ಷದ ನೇಥಿಲ್ ಕುಮಾರ್ ಹೇಳಿದ್ದಾರೆ. ಮೋಸ ಹೋದವರಿ ಹೆಚ್ಚಿನವರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ಹಿನ್ನೆಲೆಯನ್ನು ಹೊಂದಿರುವ ಪದವೀಧರರು ಸೇರಿದ್ದಾರೆ.
BIG NEWS: ನಿಯಮಾನುಸಾರ ನೌಕರರು ‘Moonlight’ ಕೆಲಸ ಮಾಡುವಂತಿಲ್ಲ: ಕೇಂದ್ರ ಸರ್ಕಾರ
BIGG NEWS : ಆಂಧ್ರದ ರೌಡಿಶೀಟರ್ ಮೇಲೆ ಗುಂಡಿನ ದಾಳಿ ಪ್ರಕರಣ : ಮತ್ತೋರ್ವ ಆರೋಪಿ ಕೋರ್ಟ್ ಗೆ ಶರಣು