ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗೂಗಲ್ ಒಡೆತನದ ಯೂಟ್ಯೂಬ್ (youtube )ಅನ್ನು ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಾರೆ. ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಹಿಸುತ್ತಿರುತ್ತದೆ. ಯೂಟ್ಯೂಬ್ ಅನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಆಕರ್ಷಕವಾಗಿಸಲು ಗೂಗಲ್ ಹೊಸ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗೂಗಲ್ ಫಾರ್ ಇಂಡಿಯಾ ಈವೆಂಟ್ನಲ್ಲಿ ಯೂಟ್ಯೂಬ್ನ ಹೊಸ ವೈಶಿಷ್ಟ್ಯವನ್ನು ಪ್ರಕಟಿಸಿದೆ. ಈ ಹೊಸ ವೈಶಿಷ್ಟ್ಯದೊಂದಿಗೆ, ವಿಡಿಯೋದ ನಿರ್ದಿಷ್ಟ ದೃಶ್ಯವನ್ನು ಈಗ ಯೂಟ್ಯೂಬ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಇದನ್ನು ಪರೀಕ್ಷಿಸುತ್ತಿರುವ ಬೀಟಾ ಬಳಕೆದಾರರಿಗೆ ಲಭ್ಯವಿದೆ.
ವಿಡಿಯೋದ ಯಾವುದೇ ದೃಶ್ಯವನ್ನು ತಕ್ಷಣವೇ ನೋಡಬಹುದು
ಈ ಮೊದಲು ಸಿನಿಮಾದ ಯಾವುದೋ ಒಂದು ನಿರ್ದಿಷ್ಟು ದೃಶ್ಯವನ್ನು ನೋಡಬೇಕಿದ್ದರೆ , ಇಡೀ ಸಿನಿಮಾವನ್ನು ವೀಕ್ಷಿಸಬೇಕಿತ್ತು. ಆದರೆ ಈ ಹೊಸ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಯಾವುದೇ ನಿರ್ದಿಷ್ಟ ದೃಶ್ಯ, ಕ್ಷಣ, ಸ್ಥಳ ಅಥವಾ ಯಾವುದೇ ವಿಡಿಯೋದಲ್ಲಿ ಯೂಟ್ಯೂಬ್ ನಿಂದ ಸುಲಭವಾಗಿ ಪಡೆಯಬಹದು. ಪ್ರಸ್ತುತ ಈ ವೈಶಿಷ್ಟ್ಯದ ಪರೀಕ್ಷೆಯು ನಡೆಯುತ್ತಿದೆ. ಅದರ ನಂತರ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.
ಮಲ್ಟಿ ಸರ್ಚ್ ಫೀಚರ್
ಇದಲ್ಲದೆ, ಗೂಗಲ್ ಹುಡುಕಾಟಕ್ಕಾಗಿ ಮಲ್ಟಿಸರ್ಚ್ ವೈಶಿಷ್ಟ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಫೋಟೋ ಅಥವಾ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಮತ್ತು ಅವರ ಪ್ರಶ್ನೆಯಲ್ಲಿ ಪಠ್ಯವನ್ನು ನಮೂದಿಸುವ ಆಯ್ಕೆಯನ್ನು ನೀಡುತ್ತದೆ. ಇದರೊಂದಿಗೆ ಹುಡುಕಾಟವನ್ನು ಸುಲಭಗೊಳಿಸಲು ಕಂಪನಿಯು ಪ್ರಯತ್ನಿಸಲಿದೆ. ಇದರೊಂದಿಗೆ ತನ್ನ ಪ್ರಕಟಣೆಯಲ್ಲಿ, ಈ ವೈಶಿಷ್ಟ್ಯವು ಹಿಂದಿ, ಪಂಜಾಬಿ ಮತ್ತು ಇತರ ಭಾಷೆಗಳಂತಹ ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ಗೂಗಲ್ ಹೇಳಿದೆ.
VIRAL NEWS: ಅಮ್ಲೇಟ್ನಲ್ಲಿ ಜೀರಳೆ ನೋಡಿ ಬೆಚ್ಚಿ ಬಿದ್ದ ರೈಲ್ವೆ ಪ್ರಯಾಣಿಕ…! ಮುಂದೆನಾಯ್ತು ಗೊತ್ತಾ?
BIGG NEWS : ಕೊಪ್ಪಳದಲ್ಲಿ ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ