ಮಂಡ್ಯ: ಸಾಕಷ್ಟು ವಿವಾದಕ್ಕೀಡು ಮಾಡಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮತ್ತೆ ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ.
BIGG NEWS: ನಾಳೆ ವಿಧಾನಪರಿಷತ್ ಸಭಾಪತಿ ಚುನಾವಣೆ; ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ
ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯಲ್ಲಿ ನಡೆಯುತ್ತಿರುವ ಮದರಸ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು ನೀಡಿದೆ. ಜಿಲ್ಲಾಡಳಿತಕ್ಕೆ ಹಿಂದೂ ಜಾಗರಣ ವೇದಿಕೆ ಬಿಗಿ ಪಟ್ಟು ಹಿಡಿದಿದೆ.ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಮನವಿ ಮಾಡಿದ್ದು, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಚಂದನ್, ಮುಖಂಡ ಬಾಲರಾಜು ನೇತೃತ್ವದಲ್ಲಿ ಮನವಿ ಮಾಡಿದ್ದಾರೆ. 1935 ರಲ್ಲಿ ಮಸೀದಿಯು ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದೆ. ಕಾಯ್ದೆ ಅನ್ವಯ ಕಟ್ಟಡ ಯಾವುದೇ ಧರ್ಮಕ್ಕೆ ಸೇರುವುದಿಲ್ಲ.
ಆದರೆ ಜಾಮಿಯ ಮಸೀದಿಯಲ್ಲಿ ಅಕ್ರಮ ಮದರಸ ನಡೆಯುತ್ತಿದೆ.
BIGG NEWS: ನಾಳೆ ವಿಧಾನಪರಿಷತ್ ಸಭಾಪತಿ ಚುನಾವಣೆ; ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ
ಇದೀಗ 10 ದಿನಗಳ ಒಳಗಡೆ ಮದರಸ ತೆರವು ಮಾಡಿ ಎಂದು ಹಿಂದೂ ಜಾಗರಣ ವೇದಿಕೆ ಗಡುವು ನೀಡಿದೆ. ಇಲ್ಲ ಪ್ರತಿ ಶನಿವಾರ ಹಿಂದೂಗಳಿಗೆ ಹನುಮಾನ್ ಚಾಲೀಸ್, ಭಜನೆಗೆ ಅವಕಾಶ ಕೊಡಿ. ತಪ್ಪಿದಲ್ಲಿ ಪ್ರಾಚ್ಯ ವಸ್ತು ಇಲಾಖೆ ಮುಂದೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ.
ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿಗೆ ಶ್ರೀರಂಗಪಟ್ಟಣ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರ ಮನವಿ ಮಾಡಿದ್ದಾರೆ.