ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಎಸ್ ಎಸ್ ಎಲ್ ಸಿ ಪಾಸಾಗಿರುವಂತ ಅಡುಗೆಯವರಿಗೆ ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗೆ ಮುಂಬಡ್ತಿಗಾಗಿ ಹುದ್ದೆ ಸೃಜಿಸಲು ಸರ್ಕಾರಕ್ಕೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ರೇ, ಶೀಘ್ರವೇ ಅಡುಗೆಯವರಿಗೆ ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗೆ ಮುಂಬಡ್ತಿ ದೊರೆಯಲಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು, ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಪತ್ರಬರೆದಿದ್ದಾರೆ. ಅದರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆಯವರ ಹುದ್ದೆಗಳಲ್ಲಿ ನೇಮಕ ಹೊಂದಿ ಸುಮಾರು 25 ರಿಂದ 30 ವರ್ಷಗಳ ಸೇವೆಯನ್ನು ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರಿಗೆ ಮುಂಬಡ್ತಿ ದೊರೆತಿರುವುದಿಲ್ಲ ಎಂದಿದ್ದಾರೆ.
57.5% ಮಂದಿ ಎಲೋನ್ ಮಸ್ಕ್ ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ : ಸಮೀಕ್ಷೆ | Elon Musk
ಇಲಾಖಾ ವಿದ್ಯಾರ್ಥಿನಿಲಯಗಳಲ್ಲಿ 5000 ಅಡುಗೆಯವರ ಹುದ್ದೆಗಳಿದ್ದು, ಈ ಪೈಕಿ ಒಟ್ಟು ಶೇ.50ರಷ್ಟು ಅಂದರೇ 2500 ಕಿರಿಯ ನಿಲಯ ಮೇಲ್ವಿಚಾರಕ ಹುದ್ದೆಗಳನ್ನು ಸೃಜನ ಮಾಡಬೇಕಾಗಿರುತ್ತದೆ. ಆದ್ರೇ ಕೇವಲ 307 ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗಳು ಮಾತ್ರವೇ ಸೃಜನೆಯಾಗಿದ್ದು, ಇದು ಒಟ್ಟಾರೆ ಮಂಜೂರಾತಿಯ ಹುದ್ದೆಗಳಲ್ಲಿ ಶೇ.25ರಷ್ಟು ಸಂಖ್ಯೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಆದ್ರೇ ಅದೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೊದಲ ಹಂತದಲ್ಲಿ 302 ಎರಡನೇ ಹಂತದಲ್ಲಿ 2016 ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗಳನ್ನು ಒಟ್ಟಾರೆ 518 ಹುದ್ದೆಗಳನ್ನು ಸೃಜನೆ ಮಾಡಿ, ಅರ್ಹ ಗ್ರೂಪ್-ಡಿ ನೌಕರರಿಗೆ ಮುಂಬಡ್ತಿ ನೀಡಿರುತ್ತಾರೆ ಎಂದು ಹೇಳಿದ್ದಾರೆ.
BIG NEWS: ಮೃತನ ವಿವಾಹೇತರ ಸಂಬಂಧದ ಮಕ್ಕಳಿಗೂ ಪರಿಹಾರದ ಹಕ್ಕಿದೆ – ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
2018ರ ನಂತ್ರ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಮೇಲೆ ನೇಮಕಾತಿ ಹೊಂದಿದ ಅಡುಗೆಯವರಿಗೆ ಮುಂಬಡ್ತಿಗೆ ವೃಂದ ಮತ್ತು ನೇಮಕಾತಿಯಲ್ಲಿ ದ್ವಿತೀಯ ಪಿಯುಸಿ ನಿಗದಿಪಡಿಸಿದ್ದು, 2018ಕ್ಕೂ ಮೊದಲನೇ ನೇಮಕಾತಿಯಾಗಿರುವ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿ ನಿಲಯದ ಅಡುಗೆಯವರ ಸಿಬ್ಬಂದಿಗೆ ಮುಂಬಡ್ತಿ ನೀಡಿವು ಕುರಿತು ಅವಶ್ಯಕತೆ ಇರುವ 820 ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಪತ್ರನೀಡಲಾಗಿದ್ದು, ಅದನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 2018ರ ನಂತರ ಎಸ್ ಎಸ್ ಎಲ್ ಸಿ ಪಾಸಾದ ಅಡುಗೆಯವರಿಗೆ ಮುಂಬಡ್ತಿ ನೀಡುವ ಸಲುವಾಗಿ 820 ಕಿರಿಯ ಮೇಲ್ವಿಚಾರಕರ ಹುದ್ದೆಗಳನ್ನು ಮಂಜೂರು ಮಾಡುವ ಕುರಿತು ಸರ್ಕಾರದ ಹಂತದಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೇ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಕೆಲಸ ಮಾಡುತ್ತಿರುವಂತ ಅಡುಗೆಯವರಿಗೆ ಕಿರಿಯ ನಿಲಯ ಮೇಲ್ವಿಚಾರಕರ ಹುದ್ದೆಗೆ ಮುಂಬಡ್ತಿ ಸಿಗಲಿದೆ.