ಬೆಳಗಾವಿ: ನನಗೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ಹೀಗಿದ್ದರೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಇನ್ನೂ ಮೂರು, ನಾಲ್ಕು ತಿಂಗಳ ಸರ್ಕಾರದ ಆಡಳಿತ ಬಾಕಿ ಇದೆ. ಆದರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ ಎಂಬುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಬಳಿಯಲ್ಲಿ ಅಧಿವೇಶನಕ್ಕೆ ಗೈರು ಹಾಜರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸರ್ಕಾರದ ಆಡಳಿತಾವಧಿ ಮುಕ್ತಾಯಕ್ಕೆ 3-4 ತಿಂಗಳಿದೆ. ಆದರೂ ಸಂಪುಟ ವಿಸ್ತರಣೆ ಮಾಡಿಲ್ಲ. ನನಗೆ ಕ್ಲೀನ್ ಚಿಟ್ ಸಿಕ್ಕ ಬಳಿಕವೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ನಿಮ್ಮನ್ನು ಸಂಪುಟಕ್ಕೆ ಏಕೆ ಸೇರಿಸಿಕೊಂಡಿಲ್ಲ ಎಂಬುದಾಗಿ ಕ್ಷೇತ್ರದ ಜನತೆ ಕೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಕಾಲದಲ್ಲಿ ನೆನಪಾಗದ ಮಹಾನುಭಾವರು – ಸಚಿವ ಸಿ. ಸಿ. ಪಾಟೀಲರ ಟೀಕೆ
ಇನ್ನೂ ಅಧಿವೇಶನಕ್ಕೆ ಯಾಕೆ ಗೈರು ಹಾಜರಾಗಿದ್ದೀರಿ ಎಂಬುದಾಗಿ ಕೇಳಿದಂತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದಂತ ಅವರು, ನನ್ನದು ಸೌಮ್ಯ ಸ್ವರೂಪದ ಪ್ರತಿಭಟನೆಯಾಗಿದೆ ಎಂದರು.
57.5% ಮಂದಿ ಎಲೋನ್ ಮಸ್ಕ್ ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ : ಸಮೀಕ್ಷೆ | Elon Musk