ಬೆಂಗಳೂರು: ಮೋಟಾರು ವಾಹನ ಅಪಘಾತದಂತ ಪ್ರಕರಣದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದ ಹಕ್ಕಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಹೇಳಿದೆ.
2012ರಲ್ಲಿ ಮೋಟಾರು ವಾಹನ ಅಪಘಾತದಲ್ಲಿ ಮಲ್ಲಿಕಾರ್ಜುನ ಎಂಬುವರು ಮೃತಪಟ್ಟಿದ್ದರು. ಪರಿಹಾರ ನೀಡದ ವಿಮಾ ಕಂಪನಿಯಿಂದ ಪರಿಹಾರ ಕೋರಿ ಹೈಕೋರ್ಟ್ ಗೆ ಮೃತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆ, ಪುತ್ರ ಅರ್ಜಿ ಸಲ್ಲಿಸಿದ್ದರು.
ಡಿಕೆಶಿ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ವಿಚಾರ: ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಲ್ಲ – ಬಾಲಚಂದ್ರ ಜಾರಕಿಹೊಳಿ
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ನ್ಯಾಯಪೀಠವು, ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದಲ್ಲಿ ಹಕ್ಕಿಲ್ಲ. ಆದ್ರೇ ಆ ಸಂಬಂಧಕ್ಕೆ ಹುಟ್ಟಿದ ಪುತ್ರನಿಗೆ ಪರಿಹಾರದಲ್ಲಿ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟರು.
ಇನ್ನೂ ಮೃತ ತಂದೆ-ತಾಯಿಗೆ ಪರಿಹಾರದಲ್ಲಿ ತಲಾ ಶೇ.30ರಷ್ಟು ನೀಡಬೇಕು. ಮೃತ ಪುತ್ರನಿಗೆ ಪರಿಹಾರದಲ್ಲಿ ಶೇ.40ರಷ್ಟು ನೀಡಬೇಕು ಎಂಬುದಾಗಿ ವಿಮಾ ಕಂಪನಿಗೆ ಹೈಕೋರ್ಟ್ ಏಕ ಸದಸ್ಯ ಪೀಠವು ನಿರ್ದೇಶನ ನೀಡಿತು.