ಬೆಳಗಾವಿ: ನನ್ನ ಮನಸ್ಸಿನಲ್ಲೂ ಇತ್ತು ನೇಕಾರರ ಸಮಸ್ಯೆ ಬಗೆಹರಿಸುವ ನಿಟ್ಟೆನಲ್ಲಿ ಯೋಜನೆ ಕೊಡಬೇಕು ಅಂತ. ಹೀಗಾಗಿ ನೇಕಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದೆ. ನೇಕಾರರ ಸಮ್ಮಾನ್ ಯೋಜನೆಯಡಿ ಪವರ್ ಲೂಮ್ ನಲ್ಲಿ ಕೆಲಸ ಮಾಡುವವರಿಗೆ 5 ಸಾವಿರ ನೀಡ್ತೀವೆ. ಸಂಕ್ರಾಂತಿ ಹಬ್ಬದ ದಿನದೊಂದು ಈ ಯೋಜನೆ ಜಾರಿಗೆ ಬರಲಿದೆ. ಯಾರು ಆಗೋದಿಲ್ಲ ಅಂತ ಹೇಳ್ತಾರೆ ಅವರಿಗೆ ಹೇಳಿ ಸಂಕ್ರಾಂತಿ ಹಬ್ಬದ ದಿನ ಕೊಡ್ತೀವಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ನೇಕಾರರಿಗೆ ಉಚಿತ ವಿದ್ಯುತ್ ಜೊತೆಗೆ 5 ಸಾವಿರ ನೆರವನ್ನು ಸರ್ಕಾರ ನೀಡುವುದಾಗಿ ಹೇಳಿ, ಗುಡ್ ನ್ಯೂಸ್ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೇಕಾರರಿಗೆ ದೊಡ್ಡ ಇತಿಹಾಸವಿದೆ. ಮಾನವನ ರಕ್ಷಣೆ ಮಾಡಿದವರು ನೇಕಾರರು. ಸ್ವತಂತ್ರ ಹೋರಾಟದಲ್ಲಿ ವಿದೇಶಿ ಬಟ್ಟೆ ತ್ಯಜಿಸಿ ದೇಸಿ ಬಟ್ಟೆ ತಯಾರಿಕೆ ಮಾಡಿದ್ದು ನೇಕಾರರು. ನೇಕಾರಿಕೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಇದನ್ನ ಉಳಿಸಿಕೊಂಡು ಹೋಗಬೇಕಿರೋದು ಸಾಕಷ್ಟು ಅತ್ಯವಶ್ಯಕವಿದೆ ಎಂದರು.
“ವಿದ್ಯಾರ್ಥಿವೇತನ” ಸ್ಥಗಿತ: ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಂದ ಸಿಹಿ ಸುದ್ದಿ
ನೇಕಾರರ ಬಗ್ಗೆ ನಮ್ಮ ತಂದೆಯವರು ಬಹಳ ಹೇಳ್ತಿದ್ದರು. ಅವರು ಇಂಡಸ್ಟ್ರಿಯಲ್ ಮಂತ್ರಿಯಾಗಿ ನೇಕಾರರಿಗೆ ಹಲವು ಯೋಜನೆಗಳನ್ನ ತಂದ್ರು. ನೇಕಾರರಿಗೆ ಮನೆ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನ ನೀಡಿದ್ರು. ತಮ್ಮ ತಂದೆ ನೇಕಾರರಿಗೆ ನೀಡಿದ ಯೋಜನೆಯನ್ನ ಸ್ಮರಿಸಿಕೊಂಡರು. ಅಲ್ಲದೇ ನೇಕಾರರ ಸಮುದಾಯದ ಪ್ರಮುಖ ಬೇಡಿಕೆಗೆ ಬಗ್ಗೆ ಸಾಕಷ್ಟು ಮನವಿಗಳ ಬೇಡಿಕೆ ಇಟ್ಟಿದ್ದರು. ನಮ್ಮ ಶಾಸಕರು ಸಹ ಸಾಕಷ್ಟು ಮನವಿ ಮಾಡಿದ್ರು ಎಂದರು.
ಈಗ ಕೆಲವರು ಇದನ್ನ ಕಾರ್ಯಗತ ಮಾಡಲು ನಾವು ಬದ್ದರಿದ್ದೇವೆ. ನೀವೆಲ್ಲಾ ಪ್ರಮುಖರು, ಹಿರಿಯರು ಬಂದಿದ್ದೀರಿ. ಕಟ್ಟ ಕಡೆಯ ನೇಕಾರನಿಗೂ ಕಾರ್ಯಕ್ರಮ ಮುಟ್ಟುವಂತೆ ನೀವು ಮಾಡಬೇಕು. ಪಾಪ ಅವರಿಗೆ ಗೊತ್ತೇ ಇರಲ್ಲ, ಬೆಳಗ್ಗೆ ಇಂದ ಸಂಜೆವರೆಗೂ ದುಡೀತಾನೆ.ಅವರ ಗಮನಕ್ಕೆ ನೀವೆಲ್ಲಾ ತರಬೇಕು. ಉದ್ಯೋಗ ಸೃಷ್ಟಿಸುವ ನೇಕಾರರಿಗೆ ನಮ್ಮ ಸಹಕಾರ ಇರಲಿದೆ. ನಮ್ಮ ಟೆಕ್ಸ್ಟೈಲ್ಸ್ ಪಾಲಿಸಿ ಇಂದ ಅತ್ಯಂತ ಹೆಚ್ಚು ರಫ್ತು ಮಾಡಲಾಗ್ತಿದೆ. ಇಳಕಲ್ ಸೀರೆ ಸಾಕಷ್ಟು ಬ್ರಾಂಡ್ ಇದೆ, ಆದ್ರೆ ರಫ್ತು ಆಗ್ತಿಲ್ಲ. ಮಾರುಕಟ್ಟೆಯಲ್ಲಿ ಅಮೇಜಾನ್ ಸಂಸ್ಥೆ ರೀತಿಯಲ್ಲಿ ಮಾರಾಟ ಮಾಡಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬಿ.ಎಲ್.ಸಂತೋಷ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ: ಕರ್ನಾಟಕಕ್ಕೂ ನಿಮಗೂ ಸಂಬಂಧ ಏನು? ಏಕವಚನದಲ್ಲಿ ಕಿಡಿ
ನೇಕಾರ ಸಮಾಜ ಅಂದ್ರೆ ಅತ್ಯಂತ ಪ್ರಾಮಾಣಿಕ ಸಮಾಜ. ಕಾಯಕ ಯೋಗಿ ಹೇಳಿದ ರೀತಿ ಪ್ರಾಮಾಣಿಕ ಕೆಲಸ ಮಾಡ್ತಿದ್ದಾರೆ. ಬಸವಣ್ಣ ಹೇಳಿದ ರೀತಿ ರೈತರು, ನೇಕಾರರು ಮಾಡ್ತಿದ್ದಾರೆ. ಅದರಿಂದಲೇ ಸಮಾಜ ಉಳಿದಿದೆ. ರಸ್ತೆ ಮಾಡಲು ನಾನು ನೂರು ಕೋಟಿ ಬಿಡುಗಡೆ ಮಾಡಬಹುದು. ಕಟ್ಟ ಕಡೆಯ ವ್ಯಕ್ತಿಯನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರಚಕೆಲಸ ಮಾಡ್ತಿದೆ. ನಿಮ್ಮ ಉತ್ಪಾದನೆಗೆ ಸರಿಯಾದ ಬೆಲೆ ಸಿಗುವಂತೆ ನಮ್ಮ ಸರ್ಕಾರ ಮಾಡಲಿದೆ. ಜನವರಿ 14 ಸಂಕ್ರಾಂತಿಗೆ ನೇಕಾರರಿಗೆ ಸಿಗಲಿದೆ. ನೀವ್ಯಾರೂ ಕೇಳಲಿಲ್ಲ ನಮ್ಮ ಮಕ್ಕಳಿಗೆ ವಿದ್ಯಾನಿಧಿ ಕೊಡಿ ಅಂತ. ಆದ್ರೆ ರೈತರ ಮಕ್ಕಳ ರೀತಿ ನಿಮ್ಮ ಮಕ್ಕಳಿಗೂ ಸಿಗಬೇಕು ಅಂತ ಮಾಡಿದ್ದೇವೆ. ಸ್ವಾಭಿಮಾನಿಯಾಗಿ ಇರಬೇಕು ಅಂತ ವಿದ್ಯಾನಿಧಿ ಮಾಡಿದ್ದೇವೆ ಎಂದು ತಿಳಿಸಿದರು.