ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೆ ಪುಂಡಾಟ ನಡೆಸುತ್ತಿದ್ದಾರೆ. ವ್ಯಾಕ್ಸಿನ್ ಡಿಪೋ ಬಳಿ ಹೇರಲಾಗಿದ್ದ ನಿಷೇಧಾಜ್ಞೆ ನಡುವೆಯೂ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
BIGG NEWS: ಸಾವರ್ಕರ್ ಫೋಟೋ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ: ಕಾಂಗ್ರೆಸ್ ವಿರುದ್ಧ ಸುಧಾಕರ್ ಕಿಡಿ
ನಗರದ 2ನೇ ರೇಲ್ವೆಗೇಟ್ ಬಳಿ ಎಂಇಎಸ್ ಪುಂಡರು ಘೋಷಣೆ ಕೂಗಿದ್ದಾರೆ. ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್, ಉಪಮೇಯರ್ ರೇಣು ಕಿಲ್ಲೇಕರ್, ಶಿವಾನಿ ಪಾಟೀಲ್ ಹಲವು ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ.ಬೆಳಗಾವಿ, ನಿಪ್ಪಾಣಿ, ಕಾರವಾರ , ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. `ಬೆಳಗಾವಿ ನಮ್ಮ ಹಕ್ಕು – ಯಾರ ಅಪ್ಪಂದಲ್ಲ’ ಎಂದು ಘೋಷಣೆ ಕೂಗಿದ್ದಾರೆ. ನಂತರ ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದ 20ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.